Illicit Relationship: ಅಕ್ರಮ ಸಂಬಂಧದಿಂದ ಗರ್ಭಿಣಿಯಾದ ಯುವತಿಯೋರ್ವಳು (Pregnant Lady) ಯಾರಿಗೂ ತಿಳಿಯದ ರೀತಿಯಲ್ಲಿ ತನ್ನ ಬಸುರಿತನವನ್ನು ಮುಚ್ಚಿಟ್ಟು, ಬಳಿಕ ತಾನೇ ಸ್ವಯಂ ಹೆರಿಗೆ ಮಾಡಿ, ಆ ಪುಟ್ಟ ಕಂದನನ್ನು ಎಸೆದಿರುವ ಘಟನೆಯೊಂದು ತುಮಕೂರಿನ (Tumkur News) ಅರೇಗುಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ. 25 ವರ್ಷದ ಯುವತಿಯೋರ್ವಳು ಪೋಷಕರು ಇಲ್ಲದೆ ತನ್ನ ಸ್ವಂತ ಅಕ್ಕನ ಮನೆಯಲ್ಲಿದ್ದಳು. ಅರೇಗುಜ್ಜನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಈಕೆಗೆ ಯಾರದೋ ಅಕ್ರಮ ಸಂಬಂಧ ಉಂಟಾಗಿತ್ತು. ಅದರಿಂದ ಗರ್ಭಿಣಿಯಾಗಿದ್ದಳು. ಇದನ್ನು ಯಾರಿಗೂ ಹೇಳಿಕೊಳ್ಳದ ಸ್ಥಿತಿಯಲ್ಲಿದ್ದ ಆಕೆ ಏನೇನೋ ಪ್ರಯತ್ನದಿಂದ ಅದನ್ನು ನಿವಾರಿಸಲು ನೋಡಿದ್ದಾಳೆ. ಆದರೆ ಕೊನೆಗೆ ಅದು ಫಲ ಸಿಗದೆ, ಭ್ರೂಣ ಬೆಳೆಯುತ್ತಾ ಹೋಗಿದೆ.
ಇದೊಂದು ವಸ್ತುವನ್ನು ನೀರಿನಲ್ಲಿ ಬೆರೆಸಿ ನೋಡಿ, ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ!!!
ಗರ್ಭ ಬೆಳೆದ ರೀತಿಯಲ್ಲೇ ಈಕೆಗೆ ಹೊಟ್ಟೆ ದೊಡ್ಡದಾಗಿದೆ. ಆರೋಗ್ಯದಲ್ಲಿ ಕೂಡಾ ವ್ಯತ್ಯಯ ಕಂಡು ಬಂದಿದೆ. ಆದರೆ ಇದ್ಯಾವುದನ್ನೂ ಆಕೆ ಹೊರಗಡೆ ತೋರಿಸಿಕೊಳ್ಳಲಿಲ್ಲ. ಏನೂ ಆಗಿಲ್ಲವೆಂಬಂತೆ ಒಂಭತ್ತು ತಿಂಗಳು ಸಂಶಯ ಬರದ ರೀತಿಯಲ್ಲಿ ವರ್ತನೆ ಮಾಡಿದ್ದಾಳೆ. ಹೊಟ್ಟೆ ದೊಡ್ಡದಾಗಿದ್ದರೂ, ಸಡಿಲವಾದ ಬಟ್ಟೆ ಹಾಕಿಕೊಳ್ಳುತ್ತಿದ್ದಳು. ಹೊಟ್ಟೆ ದೊಡ್ಡದಾಗಿದೆ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಹೌದು ಸಣ್ಣ ಮಾಡಿಸಿಕೊಳ್ಳಬೇಕು ಎಂದು ಉತ್ತರ ನೀಡುತ್ತಿದ್ದಳಂತೆ.
ಇದರ ನಡುವೆ ಈಕೆ ಬುಧವಾರ ರಾತ್ರಿ 10 ಗಂಟೆಯ ಹೊತ್ತಿಗೆ ಮನೆಯಿಂದ ಹೊರಗೆ ಹೋಗಿ ಸ್ವಯಂ ಹೆರಿಗೆ ಮಾಡಿದ್ದಾಳೆ ಎಂದು ವರದಿಯಾಗಿದೆ. ನಂತರ ಮಗುವನ್ನು ಅಲ್ಲೇ ಪಕ್ಕದಲ್ಲಿ ಎಸೆದು ಮನೆಗೆ ಮರಳಿ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಳು. ಆದರೆ ಗ್ರಾಮಸ್ಥರಿಗೆ ಗುರುವಾರ ಬೆಳಗ್ಗೆ ನವಜಾತು ಹೆಣ್ಣುಮಗುವಿನ ಶವ ಕಂಡು ಬಂದಿದ್ದು, ಇದನ್ನು ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಈ ನಡುವೆ ಕೆಲವರಿಗೆ ಈ ಯುವತಿ ಮೇಲೆ ಸಂಶಯ ಉಂಟಾಗಿದ್ದರಿಂದ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಿ, ಆಕೆಯನ್ನು ಪರಿಶೀಲನೆ ಮಾಡಲು ಹೇಳಿದಾಗ ಆಕೆ ರಕ್ತಸ್ತಾವದಿಂದ ಬಳಲುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವಿಚಾರಣೆ ನಡೆಸಿದಾಗ ಸತ್ಯ ತಿಳಿದು ಬಂದಿದೆ.
ಈ ಘಟನೆ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯಲಿದೆ.
