Home » ಮಂಗಳೂರು: ಪ್ರೀತಿಸಿದ್ದು ಒಬ್ಬಳನ್ನು, ಮದುವೆ ಮತ್ತೊಬ್ಬಳ ಜೊತೆ !! ತಾಳಿ ಕಟ್ಟೋ ಟೈಮ್ ಗೆ ಖಡಕ್ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ, ಮುಂದೆನಾಯ್ತು !!

ಮಂಗಳೂರು: ಪ್ರೀತಿಸಿದ್ದು ಒಬ್ಬಳನ್ನು, ಮದುವೆ ಮತ್ತೊಬ್ಬಳ ಜೊತೆ !! ತಾಳಿ ಕಟ್ಟೋ ಟೈಮ್ ಗೆ ಖಡಕ್ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ, ಮುಂದೆನಾಯ್ತು !!

1 comment

Mangaluru: ಇಂದು ಹುಡುಗ-ಹುಡುಗಿಯರ ನಡುವೆ ಪ್ರೀತಿ, ಪ್ರೇಮಗಳು ಆಗುವುದು ಸಾಮಾನ್ಯ. ಆದರೆ ಆ ಎಲ್ಲಾ ಪ್ರೀತಿ, ಪ್ರೇಮಗಳು ಕೊನೇವರೆಗೂ ಹಾಗೆ ಇರುವುದಿಲ್ಲ. ಎಲ್ಲಾ ಕೆಲಸ ಮುಗಿಸಿಕೊಂಡು ನಡು ದಾರಿಯಲ್ಲೇ ಬಿಟ್ಟು ಕೈತೊಳೆದುಕೊಳ್ಳುತ್ತಾರೆ. ಇದೀಗ ಅಂತದ್ದೇ ಘಟನೆಯೊಂದು ಮಂಗಳೂರಿನಲ್ಲಿ(Mangaluru)ನಡೆದಿದ್ದು, ಯುವಕನೊಬ್ಬನ ಪ್ರೀತಿಸಿದ್ದು, ಒಬ್ಬಳನ್ನು, ಆದರೆ ಮದುವೆಯನ್ನು ಬೇರೊಬ್ಬಳೊಡನೆ ಮಾಡಿಕೊಳ್ಳಲು ಹಸೆಮಣೆ ಏರಿದ್ದಾನೆ. ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಮಾಜಿ ಪ್ರಿಯತಮೆ ಎಂಟ್ರಿಕೊಟ್ಟಿದ್ದು, ಊಹಿಸದ ಬೆಳವಣಿಗೆಗಳು ನಡೆದಿವೆ.

ಹೌದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಉಳ್ಳಾಲ ತಾಲೂಕಿನ ಬೀರಿ ಬಳಿ ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ಹೈಡ್ರಾಮ ನಡೆಸಿದ್ದಾಳೆ. ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಗೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆಂದು ಆರೋಪಿಸಿದ್ದಾಳೆ.

ಇದನ್ನು ಓದಿ: Congress: ಬಿಜೆಪಿಯ ‘ನನನ್ನು ಬಂಧಿಸಿ’ ಅಭಿಯಾನಕ್ಕೆ ಕಾಂಗ್ರೆಸ್ ನಿಂದ ಸಖತ್ ಕೌಂಟರ್ – ಬಿಜೆಪಿ ನಾಯಕರ ಮರ್ಯಾದೆಯನ್ನೇ ಹಾರಜಾಕಿದ ‘ಕೈ’ ಪಡೆಯ ಹೊಸ ಪೋಸ್ಟರ್

ಇಷ್ಟೇ ಅಲ್ಲದೆ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಆದರೂ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಖಾಸಗಿ ಹಾಲ್ನಲ್ಲಿ ಮದುವೆ ನಡೆಯುತ್ತಿರುವ ವಿಚಾರ ತಿಳಿದು ಉಳ್ಳಾಲ ಪೊಲೀಸರೊಂದಿಗೆ ಆಗಮಿಸಿ ಹಾಲ್ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ. ಆದರೆ ಪೋಲೀಸರು ಯುವಕನ ಬದಲಿಗೆ ಆ ಯುವತಿಯನ್ನೇ ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು ನಂತರ ಅಕ್ಷಯ್ ಮದುವೆ ನಿಶ್ಚಯವಾದ ಮಂಗಳೂರು ಯುವತಿಗೆ ತಾಳಿ ಕಟ್ಟಿದ್ದಾನೆ.

You may also like

Leave a Comment