Home » Food Tips: ಎಚ್ಚರ, ಆಲೂಗಡ್ಡೆ ಪ್ರಿಯರೇ ಇತ್ತ ಗಮನಿಸಿ, ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ!!

Food Tips: ಎಚ್ಚರ, ಆಲೂಗಡ್ಡೆ ಪ್ರಿಯರೇ ಇತ್ತ ಗಮನಿಸಿ, ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ!!

1 comment

Food Tips: ಆಲೂಗಡ್ಡೆ ಬಹಳ ಜನರಿಗೆ ಫೆವರೇಟ್‌. ಇವುಗಳನ್ನು ಅನೇಕ ವಿಧಗಳಲ್ಲಿ ಬಳಸಬಹುದು. ಆಲೂಗಡ್ಡೆ ಬೋಂಡಾ, ಪಲ್ಯ, ಸಾಗು ಹೀಗೆ ಹಲವು ವಿಧಗಳಲ್ಲಿ ಬಳಸಬಹುದು. ಹಾಗೂ ಇದು ಬೇಗನೇ ಬೇಯುವುದರಿಂದ ಹೆಚ್ಚಿನ ಶ್ರಮ ಕೂಡಾ ಇರುವುದಿಲ್ಲ.

ಆದರೆ ನೀವು ಗಮನಿಸಿರುವುದು ಈ ಆಲೂಗಡ್ಡೆಯನ್ನು ಕತ್ತರಿಸಿದಾಗ ಅದರ ಬಣ್ಣ ಹಸಿರಾಗಿರುವುದು. ಇಲ್ಲಿ ಕೆಲವರಿಗೆ ಒಂದು ಪ್ರಶ್ನೆ ಕಾಡುತ್ತೆ, ಇದನ್ನು ತಿನ್ನಬಹುದೇ ಎಂದು. ಇದು ಆರೋಗ್ಯಕ್ಕೆ ಉತ್ತಮವೇ? ಈ ಕುರಿತು ಕೆಲವೊಂದು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಆಲೂಗಡ್ಡೆ ಮೇಲೆ ಹಸಿರು ಬಣ್ಣ ಕಂಡರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಸೆಯಲಾಗುತ್ತದೆ. ಏಕೆಂದರೆ ಇದು ಕೊಳೆತು ಹೋಗಿದೆ ಎಂದು ಜನರು ಭಾವಿಸುತ್ತಾರೆ.

ಇದನ್ನೂ ಓದಿ: Bank Jobs;ಬ್ಯಾಂಕ್‌ ಕೆಲಸಕ್ಕೆ ಸೇರಲು ಬಂದಿದೆ ಹೊಸ ರೂಲ್ಸ್‌, ಇನ್ನು ಮುಂದೆ ಕ್ರೆಡಿಟ್‌ ಸ್ಕೋರ್‌ ಬೇಕು!!!

ಆದರೆ ಆಲೂಗಡ್ಡೆ ಮೇಲೆ ಹಸಿರು ಬಣ್ಣ ಹೊಂದಿದ್ದರೆ ಅದನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ ಎಂದು ಆಹಾರ ತಜ್ಞರ ಮಾತು. ಸೋಲನೈನ್‌ ಎಂಬ ಗ್ಲೈಕೋಆಲ್ಕಲಾಯ್ಡ್‌ ಸಂಯುಕ್ತವು ಅಧಿಕವಾಗಿರುವಾಗ ಆಲೂಗಡ್ಡೆಗಳು ಹಸಿರು ಬಣ್ಣಕ್ಕೆ ತಿರುಗುತ್ತದೆ. ಇಂತಹ ಆಲೂಗಡ್ಡೆ ತಿಂದರೆ ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ವಿಷಕಾರಿ ಎಂದು ಹೇಳಲಾಗಿದೆ.

ಹೆಚ್ಚು ಹಸಿರು ಬಣ್ಣ ಹೊಂದಿರುವ ಆಲೂಗಡ್ಡೆ ತಿಂದರೆ ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ ಮತ್ತು ಫುಡ್‌ ಪಾಯ್ಸನಿಂಗ್‌ ಕಾರಣವಾಗುತ್ತದೆ. ಕೆಲವೊಮ್ಮೆ ಈ ಸೋಲನೈನ್‌ ತಲೆನೋವು ಮತ್ತು ಚಡಪಡಿಕೆಗೆ ಕಾರಣವಾಗುವ ಸಂಭವನೀಯತೆ ಹೆಚ್ಚು.

You may also like

Leave a Comment