Rishab Shetty: ಸ್ಯಾಂಡಲ್ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty)ಸದ್ಯ ತಮ್ಮ ಮುಂದಿನ ಚಿತ್ರ ‘ಕಾಂತಾರ 2’ (ಕಾಂತಾರದ ಅಧ್ಯಾಯ 1)ರಲ್ಲಿ ಬ್ಯುಸಿಯಾಗಿದ್ದು, ಇದು ರಿಷಬ್ ಶೆಟ್ಟಿ ಅವರ ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರದ ಪ್ರೀಕ್ವೆಲ್ ಸಿನಿಮಾವಾಗಿದ್ದು, 2024ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಚಿತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ( `ಕಾಂತಾರ 2’ ) ಸಿನೆಮಾದ ಮುಹೂರ್ತ ನೆರವೇರಿದೆ. ಈಗಾಗಲೇ ʻಕಾಂತಾರʼ ಸಿನಿಮಾ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ರಿಷಬ್ ಶೆಟ್ಟಿಯವರನ್ನು ಮೈಸಂದಾಯ ದೈವ ಆಲಂಗಿಸಿ, ಕಾಂತಾರ ರೀತಿಯಲ್ಲೇ ರಿಷಬ್‌ಗೆ ಆಶೀರ್ವಾದ ನೀಡಿದೆ ಎನ್ನಲಾಗಿದೆ. ದೈವದ ಅಭಯ ಪಡೆಯಲು ಮಂಗಳೂರಿಗೆ ರಿಷಬ್ ಆಗಮಿಸಿದೆ. ರಿಷಬ್ ಅವರು ದೈವ ದರ್ಶನವನ್ನು ಪಡೆದ ಸಂದರ್ಭ ದೈವ ಅಭಯ ನೀಡಿದ್ದು,ಭಯ ಪಡಬೇಡ ನಾನಿದ್ದೇನೆʼ ಎಂದು ತಿಳಿಸಿದೆ ಎನ್ನಲಾಗಿದೆ.
ರಿಷಬ್ ಅವರ ಇಚ್ಛೆಯಾನುಸಾರ ವಜ್ರದೇಹಿ ಶ್ರೀ ಕೋಲಕ್ಕೆ ಆಹ್ವಾನ ನೀಡಿದ್ದರು. ದೈವ ಕೂಡ ಏನೇ ಸಮಸ್ಯೆ ಬಂದರೂ ಕೂಡ ಕುಗ್ಗಬೇಡ ಎಂದು ರಿಷಬ್ ಅವರಿಗೆ ಸೂಚನೆ ನೀಡಿದೆಯಂತೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮೂಲಕ ಆಶೀರ್ವದ ಮಾಡಿದೆ. ಮಂಗಳೂರು ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭೇಟಿ ನೀಡಿದ್ದಾರೆ. ವಜ್ರದೇಹಿ ದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಪಾಲ್ಗೊಂಡು, ಸ್ವಯಂಪ್ರೇರಿತವಾಗಿ ದೈವದ ಅಭಯ ಪಡೆಯಲು ಆಗಮಿಸಿದ್ದರಂತೆ.ದೈವಾರಾಧನೆಯ ಕಟ್ಟುಪಾಡು ಅಧ್ಯಯನ ನಡೆಸಿ, ದೈವದ ನೆಲೆಯನ್ನ ಅರಿತುಕೊಂಡು ಸಮಾಜಕ್ಕೆ ತೋರಿಸಬೇಕು ಎಂಬ ಇಚ್ಛೆಯಿಂದು ರಿಷಬ್ ಕೋಲಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.
