Home » BBK Season 10 Drone Pratap: “We Love Drone Pratap” ಟ್ವಿಟ್ಟರ್‌ನಲ್ಲಿ ಪ್ರತಾಪ್‌ ಹೆಸರು ಟ್ರೆಂಡ್‌!!!

BBK Season 10 Drone Pratap: “We Love Drone Pratap” ಟ್ವಿಟ್ಟರ್‌ನಲ್ಲಿ ಪ್ರತಾಪ್‌ ಹೆಸರು ಟ್ರೆಂಡ್‌!!!

by Mallika
0 comments

Drone Pratap: ಈ ಬಾರಿಯ ಕನ್ನಡ ಸೀಸನ್‌ ಬಿಗ್‌ಬಾಸ್‌ನಲ್ಲಿ ಹಲವು ಮನಸ್ಥಿತಿಯ ಸ್ಪರ್ಧಿಗಳು ಆಗಮಿಸಿದ್ದು, ಈ ಬಾರಿ ಮನೆಯವರ ಪೈಕಿ ಪ್ರತಾಪ್‌ ಕೂಡಾ ಒಬ್ಬರು. ಪ್ರತಾಪ್‌ ಮೊದಲಿಗೆ ತಾನೇ ಡ್ರೋನ್‌ ಮಾಡಿದ್ದು ಎಂದು ಹೇಳಿದ್ದು, ಅನಂತರ ಅದು ಸುಳ್ಳು ಎಂದು ಗೊತ್ತಾದ ಮೇಲೆ ಅವರ ಬಗ್ಗೆ ಬೇರೆಯದೇ ಅಭಿಪ್ರಾಯ ಉಂಟಾಗಿತ್ತು. ಒಂದೆರಡು ವಾರದಲ್ಲಿ ಎಲಿಮಿನೇಟ್‌ ಆಗಬಹುದು ಪ್ರತಾಪ್‌ ಎಂದುಕೊಂಡಿದ್ದ ಎಲ್ಲರ ಊಹೆಗಳನ್ನು ಜನರು ನಿರಾಸೆ ಮಾಡಿದ್ದರು. ಹೌದು, ಡ್ರೋನ್‌ ಪ್ರತಾಪ್‌ ಹೈಲೈಟ್‌ ಆಗಿದ್ದಾರೆ. ಅನೇಕ ಜನರಿಗೆ ಅವರೀಗ ಇಷ್ಟ. ಇದೀಗ ಡ್ರೋನ್‌ ಹೆಸರಲ್ಲಿ ಅನೇಕ ಫ್ಯಾನ್‌ ಪೇಜ್‌ಗಳು ಕ್ರಿಯೇಟ್‌ ಆಗಿದೆ. ಟ್ವಿಟ್ಟರ್‌ನಲ್ಲಿ ಕೂಡಾ ಪ್ರತಾಪ್‌ (Drone Pratap) ಹೆಸರು ಟ್ರೆಂಡಾಗಿದೆ.

ಟ್ವಿಟರ್​ನಲ್ಲಿ 26 ಸಾವಿರಕ್ಕೂ ಅಧಿಕ ಟ್ವೀಟ್​ಗಳನ್ನು ಮಾಡಲಾಗಿದೆ. ‘We Love Drone Prathap’ ಅನ್ನೋದು ಟ್ರೆಂಡ್ ಆಗುತ್ತಿದೆ. ಭಾರತದ ಟ್ರೆಂಡ್​ನಲ್ಲಿ ಅವರ ಹೆಸರು ಕೂಡ ಬಂದಿದೆ. ಬಿಗ್‌ಬಾಸ್‌ ಫಿನಾಲೆ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಕಂಡು ಬಂದಿದೆ.

ಎರಡು ದಿನ ಏನನ್ನೂ ತಿನ್ನದ ಪ್ರತಾಪ್‌ ಅವರಿಗೆ ಆರೋಗ್ಯ ಹದಗೆಟ್ಟಿತ್ತು. ಫುಡ್‌ ಪಾಯ್ಸನ್‌ ಆಗಿದ್ದು ಎಂದು ವೈದ್ಯರು ಹೇಳಿದ್ದು, ಇಂದಿನ ಎಪಿಸೋಡ್‌ನಲ್ಲಿ ಡ್ರೋನ್‌ ಮನೆಗೆ ವಾಪಸ್‌ ಬಂದಿರುವುದು ಕಂಡು ಬಂದಿದೆ.

 

You may also like

Leave a Comment