Home » KSRTC ಹೊಸ ರೂಲ್ಸ್- ಇನ್ಮುಂದೆ ಕಂಡಕ್ಟರ್’ಗಳು ಪ್ರಯಾಣಿಕರಿಂದ 10ರೂ ಪಡೆಯಬೇಕು!!

KSRTC ಹೊಸ ರೂಲ್ಸ್- ಇನ್ಮುಂದೆ ಕಂಡಕ್ಟರ್’ಗಳು ಪ್ರಯಾಣಿಕರಿಂದ 10ರೂ ಪಡೆಯಬೇಕು!!

1 comment
KSRTC

ರಾಜ್ಯದ KSRTC ಬಸ್‌ ಕಂಡಕ್ಟರ್‌ಗಳಿಗೆ ಸಾರಿಗೆ ಇಲಾಖೆ (Transport Department)ಯು ಹೊಸ ರೂಲ್ಸ್ ಒಂದನ್ನು ಜಾರಿಗೊಳಿಸಿದ್ದು ಇನ್ಮುಂದೆ ಪ್ರಯಾಣಿಕರು 10ರೂ ಕಾಯಿನ್ ನೀಡಿದರೆ ತಕರಾರು ಮಾಡದೆ, ಸ್ವೀಕರಿಸಿಬೇಕೆಂದು ಖಡಕ್‌ ಸೂಚನೆಯೊಂದನ್ನು ಕೊಟ್ಟಿದೆ.

 

KSRTC

ಇದನ್ನೂ ಓದಿ: Donation to Ram Mandir: ಅಯೋಧ್ಯಾ ರಾಮ ಮಂದಿರಕ್ಕೆ 11ಕೋಟಿ ದೇಣಿಗೆ ನೀಡಿದ ಸಿಎಂ !!

ಹೌದು, ಈಗಾಗಲೇ ಕೇಂದ್ರ ಸರ್ಕಾರ 10ರೂ ಕಾಯಿನ್ ಅನ್ನು ಜಾರಿಗೊಳಿಸಿದೆ. ಆದರೆ ಇದನ್ನು ಯಾರೂ ಸ್ವೀಕರಿಸುತ್ತಿಲ್ಲ. ಬಸ್ ಕಂಡಕ್ಟರ್’ಗಳು ಕೂಡ ಇಷ್ಟು ದಿನ 10 ರೂ. ನಾಣ್ಯ ಕೊಟ್ಟರೆ ತೆಗೆದುಕೊಳ್ಳುತ್ತಿರಲಿಲ್ಲ. ನಾಣ್ಯ ಕೊಟ್ಟಾಗ ಇದು ಹೋಗಲ್ಲ ನೋಟು ಕೊಡಿ ಎಂದು ಹೇಳುತ್ತಿದ್ದರು. ಹೀಗಾಗಿ 10 ರೂಪಾಯಿ ನಾಣ್ಯದ(10rupee coin)ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು ಇಲಾಖೆಯ ಕಾರ್ಯದರ್ಶಿಯು ಎಲ್ಲಾ ನಿಗಮಗಳಿಗೂ ವಾರ್ನಿಂಗ್ ಮಾಡಿದ್ದು ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲೂ 10 ರೂ. ನಾಣ್ಯ ಪಡೆಯುವಂತೆ ಸೂಚಿಸಲಾಗಿದೆ.

 

ಕೇವಲ ಸೂಚನೆ ಮಾತ್ರ ನೀಡುವುದಲ್ಲದೆ ಬಸ್ ಪ್ರಯಾಣದ ವೇಳೆ ಪ್ರಯಾಣಿಕರು 10 ರೂ. ನಾಣ್ಯ (10 Rs Coin) ನೀಡಿದರೆ ಪಡೆಯಬೇಕು. ಒಂದು ವೇಳೆ 10 ರೂ. ನಾಣ್ಯ ಪಡೆಯದೇ ಇದ್ದರೆ, ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದರೆ ಆ ಬಸ್ಸಿನ ನಿರ್ವಾಹಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ರವಾನಿಸಿದೆ.

You may also like

Leave a Comment