Guru Kiran: ಖ್ಯಾತ ಸಂಗೀತ ನಿರ್ದೇಶಕ ಸ್ಯಾಂಡಲ್‌ವುಡ್ ಗಾಯಕ ಗುರುಕಿರಣ್ ಅವರ ಮನೆಯಲ್ಲಿ ಹಣ ಕಳ್ಳತನವಾಗಿದೆ. ಈ ಕುರಿತು ಗುರುಕಿರಣ್ ಅವರ ಅತ್ತೆ ಕಸ್ತೂರಿ ಶೆಟ್ಟಿ ಅವರು ಚಂದ್ರಲೇಔಟ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ಅವರ ಮನೆಯ ಕೆಲಸದಾಳು ರತ್ನಮ್ಮ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಡಿ.31 ರಂದು ಗುರುಕಿರಣ್ ಅವರು ರೂಮ್‌ನ ಬೀರುವಿನಲ್ಲಿ ಎರಡು ಲಕ್ಷ ಇಟ್ಟಿದ್ದು, ಜ.5 ರಂದು ಬೀರು ಚೆಕ್ ಮಾಡುವಾಗ ಅಲ್ಲಿಟ್ಟಿದ್ದ ಹಣ ಕಾಣಿಸಿಲ್ಲ. ನಂತರ ಜ.7 ರಂದು ಚಂದ್ರಲೇಔಟ್ ಠಾಣೆಯಲ್ಲಿ ಗುರುಕಿರಣ್ ಅವರ ಅತ್ತೆ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ: Watch: ನೇರ ಪ್ರಸಾರ ಕಾರ್ಯಕ್ರಮಕ್ಕೆ ನುಗ್ಗಿದ ಬಂದೂಕುಧಾರಿಗಳು!!! ಮುಂದಾಗಿದ್ದೇನು?
ರತ್ನಮ್ಮ ಕಳೆದ ಆರು ತಿಂಗಳಿನಿಂದ ಗುರುಕಿರಣ್ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಹಣ ಇಟ್ಟಿದ್ದ ರೂಮ್‌ಗೆ ಹೊರಗಿನ ವ್ಯಕ್ತಿಗಳಲ್ಲಿ ರತ್ನಮ್ಮ ಬಿಟ್ಟು ಬೇರೆ ಯಾರೂ ಹೋಗುತ್ತಿರಲಿಲ್ಲ ಎಂದು ವರದಿಯಾಗಿದೆ.
ಹೀಗಾಗಿ ರತ್ನಮ್ಮ ಕದ್ದಿರಬಹುದು ಎಂದು ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.
