Home » Ration Card ಇರುವ ಎಲ್ಲರಿಗೂ ಬಂತು ಹೊಸ ರೂಲ್ಸ್: ಈ ದಿನದಿಂದಲೇ ರೇಷನ್ ವಿತರಣೆ ಬಂದ್!!

Ration Card ಇರುವ ಎಲ್ಲರಿಗೂ ಬಂತು ಹೊಸ ರೂಲ್ಸ್: ಈ ದಿನದಿಂದಲೇ ರೇಷನ್ ವಿತರಣೆ ಬಂದ್!!

1 comment
Ration Card

Ration Card: ಪಡಿತರ ಚೀಟಿದಾರರಿಗೆ(Ration Card Holder)ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ!! ಭಾರತದ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹ ಜನರಿಗೆ ಪಡಿತರ ಚೀಟಿಗಳನ್ನು(Ration Card)ನೀಡುತ್ತದೆ. ಅನೇಕ ಜನರಿಗೆ, ಪಡಿತರ ಚೀಟಿಗಳು ಗುರುತಿನ ಪುರಾವೆಯಾಗಿಯೂ (Identity Proof)ಕಾರ್ಯನಿರ್ವಹಿಸುತ್ತವೆ. ಈ ನಡುವೆ ಸರಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.

 

ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಈ ವಿಚಾರ ತಿಳಿದಿರುವುದು ಅವಶ್ಯಕ. ದಿನೇ ದಿನೇ ಬಿಪಿಎಲ್ ಕಾರ್ಡ್ ಪಡಿತರ ಹೊಂದಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜನವರಿ ತಿಂಗಳಿನಿಂದಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ಮುಂದಾಗಿವೆ. ಬಳಕೆದಾರರು ಅನೇಕ ಪಡಿತರ ಚೀಟಿಗಳನ್ನು ಹೊಂದಿರುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಪಡಿತರ ಮತ್ತು ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ. ಅನರ್ಹ ಜನರ ಆದಾಯದ ಮಿತಿ ಮೀರಿದ್ದರು ಕೂಡ ಪಡಿತರದ ಪ್ರಯೋಜನ ಪಡೆಯುತ್ತಿರುವವರ ವಿರುದ್ದ ಮೇಲ್ವಿಚಾರಣೆ ಮಾಡಲು ಇದು ಅಧಿಕಾರಿಗಳಿಗೆ ನೆರವಾಗುತ್ತದೆ. ಈಗಾಗಲೇ 4 ಲಕ್ಷ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ: School-collage holiday: ರಾಮ ಮಂದಿರ ಉದ್ಘಾಟನೆಗೆ ರಜೆ ಘೋಷಿಸಿದ ರಾಜ್ಯ ಸರ್ಕಾರ !!

ಇವರ ಬಿಪಿಎಲ್ ಕಾರ್ಡ್ ರದ್ದು

*ರೇಷನ್ ಕಾರ್ಡ್ ನಲ್ಲಿ E-KYC ಮಾಡದೇ ಇರುವ ಕಾರ್ಡ್ ದಾರರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.

* ವೈಟ್ ಬೋರ್ಡ್ ಇರುವ ನಾಲ್ಕು ಚಕ್ರದ ಐಷಾರಾಮಿ ಕಾರು ಇದೆಯೋ ಅವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.

* ಬಿಪಿಎಲ್ ಕಾರ್ಡ್ ಹೊಂದಿರುವ ಯಾವುದೇ ಸದಸ್ಯರ ಆಸ್ತಿ 7ಎಕರೆ ಗಿಂತ ಹೆಚ್ಚಾಗಿದ್ದಲ್ಲಿ, ಆ ಕುಟುಂಬದ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ.

*ಆದಾಯ ತೆರಿಗೆದಾರರು,ITR ಫೈಲಿಂಗ್ಸ್ ಮಾಡುವವರಿದ್ದರೆ, ಅವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.

* 6 ತಿಂಗಳ ಕಾಲ ರೇಷನ್ ಪಡೆಯದೇ ಇದ್ದಲ್ಲಿ ಅಂತಹವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.

You may also like

Leave a Comment