Home » Killer CEO: ಟಿಶ್ಯೂ ಪೇಪರ್‌ ಮೇಲೆ ಐ ಲೈನಲರ್‌ನಲ್ಲಿ ಹತ್ಯೆಯ ಸಂಚು ಬರೆದಿದ್ದಳಾ ಹಂತಕಿ ಸುಚನಾ ಸೇಠ್‌???

Killer CEO: ಟಿಶ್ಯೂ ಪೇಪರ್‌ ಮೇಲೆ ಐ ಲೈನಲರ್‌ನಲ್ಲಿ ಹತ್ಯೆಯ ಸಂಚು ಬರೆದಿದ್ದಳಾ ಹಂತಕಿ ಸುಚನಾ ಸೇಠ್‌???

1 comment
Killer CEO

Killer CEO: ತನ್ನ ನಾಲ್ಕು ವರ್ಷದ ಮಗನನ್ನು ಗೋವಾದಲ್ಲಿ(Goa Murder Case) ಹತ್ಯೆಗೈದ ಆರೋಪದ (Killer CEO) ಮೇಲೆ ಬೆಂಗಳೂರಿನ ಮಹಿಳೆ ಸುಚನಾ ಸೇಠ್‌ (Suchana Seth) ಅವರನ್ನು ಬಂಧಿಸಲಾಗಿದ್ದು, ಪೊಲೀಸರ ತನಿಖೆ ವೇಳೆ ದಿನಕ್ಕೊಂದು ರೋಚಕ ಮಾಹಿತಿ ಹೊರಬಿದ್ದಿದೆ.

ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ (mindful AI labs) ಸಿಇಒ ಅಗಿದ್ದ ಸುಚನಾ ಸೇಠ್‌ ಕಳೆದ ವಾರ ಮಗನನ್ನು ಕರೆದುಕೊಂಡು ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ ಚೆಕ್‌ಇನ್‌ ಆಗಿದ್ದಳು ಎನ್ನಲಾಗಿದೆ. ಅಲ್ಲಿಂದ ಮಗುವಿನ ಶವವನ್ನು ಸೂಟ್‌ಕೇಸ್‌ಗೆ ತುಂಬಿಸಿಕೊಂಡು ಹೊರಬಿದ್ದಿದ್ದಳು. ಅನುಮಾನದ ಮೇರೆಗೆ ಆಕೆಯನ್ನು ಬಂಧಿಸಿದಾಗ ಹತ್ಯೆ ನಡೆಸಿದ್ದು ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆಕೆಯ ಕೈ ಬರಹದ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಟಿಪ್ಪಣಿಯ ಪೂರ್ಣ ಮಾಹಿತಿ ಪೊಲೀಸರು ಬಹಿರಂಗಪಡಿಸಿಲ್ಲ. ಆದಾಗ್ಯೂ, ಸುಚನಾ ಸೇಠ್ ತನ್ನ ಪತಿ ವೆಂಕಟ್ ರಾಮನ್‌ನೊಂದಿಗಿನ ಕಹಿ ಅನುಭವಗಳ ಬಗ್ಗೆ ಬರೆದಿದ್ದಾಳೆ ಎಂದು ಮೂಲಗಳು ಮಾಹಿತಿ ನೀಡಿವೆ.ಪತಿ ವೆಂಕಟ್ ರಾಮನ್ ಜತೆಗಿನ ಸಂಬಂಧ ಎಷ್ಟರಮಟ್ಟಿಗೆ ಹದಗೆಟ್ಟಿದೆ. ಹಾಗೂ ಮಗುವನ್ನು ಭೇಟಿಯಾಗಲು ವೆಂಕಟ್ ರಾಮನ್‌ಗೆ ಅವಕಾಶ ನೀಡಿದ ನ್ಯಾಯಾಲಯದ ಆದೇಶದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಸುಚನಾ ಈ ಟಿಪ್ಪಣಿಯಲ್ಲಿ ಉಲ್ಲೇಖ ಮಾಡಿದ್ದಾಳೆ ಎನ್ನಲಾಗಿದೆ. ಇದರಿಂದ ಆಕೆಯ ಮಾನಸಿಕ ಸ್ಥಿತಿಯನ್ನು ಸೂಚಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lakshadweep Travel Plan: ಮಂಗಳೂರಿನಿಂದಲೇ ಲಕ್ಷದ್ವೀಪಕ್ಕೆ ಟೂರ್‌ ಪ್ಯಾಕೇಜ್‌!!! 6 ಸಾವಿರಕ್ಕೆ ಇಷ್ಟೆಲ್ಲಾ ಸೌಲಭ್ಯ!

ಸುಚನಾ ಸೇಠ್‌ ಟಿಶ್ಯೂ ಪೇಪರ್‌ನ ಮೇಲೆ ಐ ಲೈನರ್‌ ಬಳಸಿ ಕಹಿ ಅನುಭವಗಳ ಬಗ್ಗೆ ಬರೆದಿದ್ದಾಳೆ. ಹೆಚ್ಚಿನ ತನಿಖೆಗಾಗಿ ಈ ಕೈ ಬರಹವನ್ನು ಫಾರೆನ್ಸಿಕ್‌ ಸೈನ್ಸ್‌ ಲಾಬ್ (Forensic Science Laboratory-FSL)ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಕೊಲೆಗೆ ಈಕೆ ಪೂರ್ವಯೋಜಿತ ಸಂಚು ನಡೆಸಿದ್ದಳು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಈಕೆ ಉಳಿದಿದ್ದ ರೂಮಿನಲ್ಲಿದ್ದ ಖಾಲಿ ಕೆಮ್ಮು ಸಿರಪ್ ಬಾಟಲಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment