Home » Killer CEO: ಗೋವಾದಲ್ಲಿ ಮಗನ ಹತ್ಯೆ ಮಾಡಿದ CEO:

Killer CEO: ಗೋವಾದಲ್ಲಿ ಮಗನ ಹತ್ಯೆ ಮಾಡಿದ CEO:

0 comments

Killer CEO: ತನ್ನ ನಾಲ್ಕು ವರ್ಷದ ಮಗನನ್ನು ಗೋವಾದಲ್ಲಿ(Goa Murder Case) ಹತ್ಯೆಗೈದ ಆರೋಪದ (Killer CEO) ಮೇಲೆ ಬೆಂಗಳೂರಿನ ಮಹಿಳೆ ಸುಚನಾ ಸೇಠ್‌ (Suchana Seth) ಅವರನ್ನು ಬಂಧಿಸಲಾಗಿದ್ದು, ಪೊಲೀಸರ ತನಿಖೆ ವೇಳೆ ದಿನಕ್ಕೊಂದು ರೋಚಕ ಮಾಹಿತಿ ಹೊರಬಿದ್ದಿದೆ.

 

ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ (mindful AI labs) ಸಿಇಒ ಅಗಿದ್ದ ಸುಚನಾ ಸೇಠ್‌ ಕಳೆದ ವಾರ ಮಗನನ್ನು ಕರೆದುಕೊಂಡು ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ ಚೆಕ್‌ಇನ್‌ ಆಗಿದ್ದಳು ಎನ್ನಲಾಗಿದೆ. ಅಲ್ಲಿಂದ ಮಗುವಿನ ಶವವನ್ನು ಸೂಟ್‌ಕೇಸ್‌ಗೆ ತುಂಬಿಸಿಕೊಂಡು ಹೊರಬಿದ್ದಿದ್ದಳು. ಅನುಮಾನದ ಮೇರೆಗೆ ಆಕೆಯನ್ನು ಬಂಧಿಸಿದಾಗ ಹತ್ಯೆ ನಡೆಸಿದ್ದು ಬೆಳಕಿಗೆ ಬಂದಿದೆ. ಈ ನಡುವೆ, ಬೆಂಗಳೂರಿನ ಸ್ಟಾರ್ಟಪ್‌ ಕಂಪನಿಯ ಸಿಇಒ ಸೂಚನಾ ಸೇಠ್‌, ತನ್ನ ಮಗನ ಮುಖ, ತನ್ನ ಪತಿಯನ್ನೇ ಹೋಲುತ್ತಿದ್ದುದರಿಂದ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.

 

ಕೊಲೆ ಮಾಡುವ ಮುನ್ನ ಸೂಚನಾ ಹಲವು ಬಾರಿ ಕುಟುಂಬ ಮತ್ತು ಸ್ನೇಹಿತರ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದರು ಎಂಬ ವಿಷಯ ತನಿಖೆಯ ಸಂದರ್ಭ ಬೆಳಕಿಗೆ ಬಂದಿದೆ. ‘ನನ್ನ ಮಗನ ಮುಖ ಅವರ ತಂದೆಯನ್ನೇ ಹೋಲುತ್ತದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಹಾಗೂ ನಮ್ಮಿಬ್ಬರ ನಡುವಿನ ಹಳಸಿದ ಸಂಬಂಧವೇ ನೆನಪಿಗೆ ಬರುತ್ತದೆ ಎಂದು ಸೂಚನಾ ಹೇಳಿಕೊಂಡಿದ್ದರಂತೆ. ಹೀಗಾಗಿ ಪುತ್ರನನ್ನು ಕೊಲೆ ಮಾಡಲು ಇದೇ ಕಾರಣವಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

You may also like

Leave a Comment