Home » Sullia ಖಾಸಗಿ ಕಾಲೇಜಿನ ವಿದ್ಯಾರ್ಥಿ ಮೇಲೆ ಹಲ್ಲೆ; ಜೀವ ಬೆದರಿಕೆ- ಪ್ರಕರಣ ದಾಖಲು!!

Sullia ಖಾಸಗಿ ಕಾಲೇಜಿನ ವಿದ್ಯಾರ್ಥಿ ಮೇಲೆ ಹಲ್ಲೆ; ಜೀವ ಬೆದರಿಕೆ- ಪ್ರಕರಣ ದಾಖಲು!!

0 comments

Sullia: ಪದವಿ ವಿದ್ಯಾರ್ಥಿಯೋರ್ವನಿಗೆ ತಂಡವೊಂದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಘಟನೆಯೊಂದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಸುಳ್ಯದ ಖಾಸಗಿ ಕಾಲೇಜಿನ ವಳಲಂಬೆಯ ವಿದ್ಯಾರ್ಥಿ ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 2023-24 ನೇ ಸಾಲಿಗೆ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಈ ವಿದ್ಯಾರ್ಥಿಗೆ ಕೆಲವು ವಿದ್ಯಾರ್ಥಿಗಳ ವಿರೋಧವಿತ್ತು ಎನ್ನಲಾಗಿದೆ.

ಶುಕ್ರವಾರ ವಿದ್ಯಾರ್ಥಿ ಇನ್ನಿಬ್ಬರು ಸ್ನೇಹಿತರೊಂದಿಗೆ ಚೆನ್ನಕೇಶವ ದೇವಸ್ಥಾನದ ಜಾತ್ರೆಗೆ ಬಂದ ಸಮಯದಲ್ಲಿ ಇನ್ನೊಂದು ಬಣದ ವಿದ್ಯಾರ್ಥಿಗಳು ಇವರನ್ನು ತಡೆದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾದ ಬಳಿಕ ಬಹಳಷ್ಟು ಹಾರಾಡುತ್ತೀಯ ಎಂದು ಹೇಳಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಕುರಿತು ವರದಿಯಾಗಿದೆ.

You may also like

Leave a Comment