Home » Ram Mandir: ಶ್ರೀರಾಮ BPL ಕಾರ್ಡ್‌ ಹೋಲ್ಡರ್‌, ಅದಕ್ಕೆ ಬಿಜೆಪಿ ಮನೆ ಕಟ್ಟಿಕೊಡ್ತಿದೆ, ಲವಕುಶರಿಗೂ ಬಿಪಿಎಲ್‌ ಕೋಟಾದಲ್ಲಿ ಮನೆ ಕಟ್ಟಿಕೊಡಿ- I.N.D.I.A ನಾಯಕಿ ವ್ಯಂಗ್ಯ

Ram Mandir: ಶ್ರೀರಾಮ BPL ಕಾರ್ಡ್‌ ಹೋಲ್ಡರ್‌, ಅದಕ್ಕೆ ಬಿಜೆಪಿ ಮನೆ ಕಟ್ಟಿಕೊಡ್ತಿದೆ, ಲವಕುಶರಿಗೂ ಬಿಪಿಎಲ್‌ ಕೋಟಾದಲ್ಲಿ ಮನೆ ಕಟ್ಟಿಕೊಡಿ- I.N.D.I.A ನಾಯಕಿ ವ್ಯಂಗ್ಯ

0 comments

Ram Mandir ಇನ್ನು ಒಂದು ವಾರದಲ್ಲಿ ಉದ್ಘಾಟನೆಯಾಗಲಿದೆ. ಜ.22 ರಂದು ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಲಿದೆ. ಕೇಂದ್ರ ಮತ್ತು ಯುಪಿ ಬಿಜೆಪಿ ಸರಕಾರ (BJP Government) ಅದ್ದೂರಿಯಾಗಿ ಸಮಾರಂಭದಲ್ಲಿ ತೊಡಗಿದೆ.

ಇದೇ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ ಸಂಸದ ಶತಾಬ್ದಿ ರಾಯ್‌ (satabdi Roy) ಬಿಜೆಪಿ ಟೀಕಿಸುವ ಭರದಲ್ಲಿ ಶ್ರೀರಾಮನ ಕುರಿತು ಹೇಳಿಕೆ ನೀಡಿರುವುದು ನಿಜಕ್ಕೂ ವಿವಾದಕ್ಕೆ ಕಾರಣವಾಗಿದೆ. ಶ್ರೀರಾಮ ಬಡತನ ರೇಖೆಗಳಿಗಿಂತ ಕೆಳಗಿರುವನೇ, ಅದಕ್ಕೆ ಬಿಜೆಪಿಯವರೂ ಮನೆ ಕಟ್ಟಿಸುವುದೇ ಎಂದು ವಿವಾದ ಸೃಷ್ಟಿಸಿದ್ದಾರೆ.

ಬಂಗಾಳಿ ನಟಿ ಮತ್ತು ತೃಣಮೂಲ ಕಾಂಗ್ರೆಸ್‌ ಸಂಸದೆಯಾಗಿರುವ ಶತಾಬ್ದಿ ರಾಯ್‌ ಶುಕ್ರವಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಿಜೆಪಿಯವರು ರಾಮನಿಗೆ ಮನೆ ಕಟ್ಟಿಕೊಡುತ್ತಿದ್ದೇವೆ ಎನ್ನುತ್ತಿದ್ದಾರೆ. ಈ ಹೇಳಿಕೆ ಕೇಳಿ ನನಗೆ ಅಚ್ಚರಿಯಾಗಿದೆ. ಬಿಜೆಪಿಯವರು ಶ್ರೀರಾಮನಿಗೆ ಮನೆ ನೀಡುವಷ್ಟು ಶಕ್ತಿ ಹೊಂದಿದ್ದಾರೆಯೇ? ಶ್ರೀರಾಮ ಬಡತನ ರೇಖೆಗಿಂತ ಕೆಳಗಿದ್ದಾನೆಯೇ (BPL), ಅದಕ್ಕಾಗಿ ಬಿಜೆಪಿಯವರು ಮನೆ ಕಟ್ಟಿಕೊಡುತ್ತಿರಬಹುದು ಎಂದು ಹೇಳಿದ್ದು, ಅಷ್ಟು ಮಾತ್ರವಲ್ಲದೇ ರಾಮನ ಮಕ್ಕಳಾದ ಲವ, ಕುಶರಿಗೂ ಬಿಪಿಎಲ್‌ ಕೋಟಾದಲ್ಲಿ ಮನೆ ಕಟ್ಟಿಕೊಡಬೇಕು ಎಂದು ಹೇಳಿ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗಿದೆ.

You may also like

Leave a Comment