Haveri Kidnap Case Updates: ರಾಜ್ಯ ಬಿಜೆಪಿ ಮಹಿಳಾ ಆಯೋಗದವರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಹಾವೇರಿಗೆಂದು ಹೋದ ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷೆ ಮಂಜುಳಾ ಅವರು ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಬರುತ್ತೇವೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ಸಾಂತ್ವನ ಕೇಂದ್ರದಿಂದ ಆಕೆಯನ್ನು ಶಿಫ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಆಕೆಯ ಆರೋಗ್ಯ ಸುಧಾರಿಸಿಲ್ಲ, ಇಂತಹ ಸಂದರ್ಭದಲ್ಲಿ ಆಕೆಯನ್ನು ತನಿಖೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ ಮಹಿಳಾ ಆಯೋಗ. ಹಾಗೂ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆನೇ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಅವರು, ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ತನ್ನ ಮೇಲೆ ಆದಂತಹ ಅತ್ಯಾಚಾರ ಈ ಎಲ್ಲಾ ವಿವರಗಳನ್ನು ಹೇಳಿದ್ದಾಳೆ. ಅಂದರೆ ಪೊಲೀಸರ ಮುಂದೆ ಹೇಳದೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿದ್ದಾಳೆ. ಇಲ್ಲಿ ಆಕೆಗೆ ಪೊಲೀಸರ ಮುಂದೆ ನಂಬಿಕೆ ಇಲ್ಲ ಎಂಬುವುದು ಗೊತ್ತಾಗುತ್ತದೆ. ಏಳು ಜನ ಅತ್ಯಾಚಾರ ಮಾಡಿದ್ದು, 30 ಜನ ಸುತ್ತ ನಿಂತು ತಮಾಷೆ ನೋಡಿದ್ದಾರೆ ಇದೆಲ್ಲವನ್ನು ಆಕೆ ಹೇಳಿಕೊಂಡಿದ್ದಾಳೆ. ಏಳು ಜನರ ಹುಡುಕಾಟ ನಡೆತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ಏಳು ಜನ ಮಾತ್ರ ಅಪರಾಧಿ ಅಂತ ನನಗೆ ಅನಿಸುವುದಿಲ್ಲ. ಐಡೆಂಟಿಫಿಕೇಶನ್ ಪೆರೇಡ್ ಮಾಡಲಿ ಎಂದು ಮಾಳವಿಕಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಕೇವಲ ಒಂದು ಕೇಸ್ ಅಲ್ಲ, ಬೆಳಕಿಗೆ ಬಾರದ ಹಲವು ಪ್ರಕರಣಗಳು ನಡೆದು ಹೋಗಿದೆ. ರೇಪ್ ಕೇಸ್‌ನಲ್ಲಿ ನಾವು ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
