Home » Father Killed Child: ಕುಡಿತದ ಅಮಲು ತಂದಿತು ಆಪತ್ತು;ಹೆಣ್ಣು ಮಗು ಹುಟ್ಟಿಲ್ಲವೆಂದು ನವಜಾತ ಶಿಶುವನ್ನೇ ಕೊಂದ ನಿರ್ದಯಿ ತಂದೆ!!

Father Killed Child: ಕುಡಿತದ ಅಮಲು ತಂದಿತು ಆಪತ್ತು;ಹೆಣ್ಣು ಮಗು ಹುಟ್ಟಿಲ್ಲವೆಂದು ನವಜಾತ ಶಿಶುವನ್ನೇ ಕೊಂದ ನಿರ್ದಯಿ ತಂದೆ!!

0 comments
Father Killed Child

Father Killed Child:ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು(Father Killed Child) ಕೊಂದಿರುವ ಘಟನೆ ವರದಿಯಾಗಿದೆ.

ಮಗುವನ್ನು ಕೊಂದ ವ್ಯಕ್ತಿಯನ್ನು ಬಜ್ಜರವಾಡ ಗ್ರಾಮದ ವ್ಯಕ್ತಿ ಅನಿಲ್ ಉಯಿಕೆ ಎಂದು ಗುರುತಿಸಲಾಗಿದೆ. ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಕೈಯಿಂದ 12 ದಿನದ ಮಗುವನ್ನು ಕಿತ್ತುಕೊಂಡು ಮಹಿಳೆಗೆ ತೀವ್ರವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ದಂಪತಿಗೆ ಈಗಾಗಲೇ 2 ಗಂಡು ಮಕ್ಕಳಿದ್ದು, ಪತ್ನಿ ಮೂರನೇ ಬಾರಿಗೆ ಗರ್ಭಿಣಿಯಾದ ಸಂದರ್ಭ ದಂಪತಿ ಮಗಳನ್ನು ಹೊಂದುವ ನಿರೀಕ್ಷೆಯಲ್ಲಿದ್ದರಂತೆ.

ಇದನ್ನೂ ಓದಿ: Flight Ticket Rate: ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು ಗೊತ್ತೇ?

ಈ ನಡುವೆ, ಪತ್ನಿ ಮೂರನೇ ಬಾರಿಗೆ ಮಗನಿಗೆ ಜನ್ಮ ನೀಡಿದ್ದರಿಂದ ಕೋಪಗೊಂಡು ಕುಡಿದು ಬಂದು ಗಲಾಟೆ ಮಾಡಿ ಅವನು ತನ್ನ ಹೆಂಡತಿಯಿಂದ ಮಗುವನ್ನು ಕಸಿದುಕೊಂಡು ಅವರ ಗುಡಿಸಲಿನಲ್ಲಿ ಕೊಂದಿದ್ದಾನೆ ಎನ್ನಲಾಗಿದೆ. ಪೊಲೀಸರ ಪ್ರಕಾರ, ಮಗುವಿನ ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳು ಗೋಚರಿಸಿದ್ದು, ಅಧಿಕಾರಿಗಳ ಪ್ರಕಾರ ಮಗು ಕತ್ತು ಹಿಸುಕಿ ಸಾವನ್ನಪ್ಪಿದೆ ಎಂದು ಸ್ಪಷ್ಟವಾಗಿದೆ. ಆದಾಗ್ಯೂ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮದ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

You may also like

Leave a Comment