Home » Yatindra Siddaramaiah: ಸಿದ್ದರಾಮಯ್ಯ ಇದೊಂದು ಕೆಲಸ ಮಾಡಿದ್ರೆ, ಪೂರ್ಣಾವಧಿ ಸಿಎಂ ಆಗಿರ್ತಾರೆ !! ಪುತ್ರ ಯತೀಂದ್ರನ ಸ್ಪೋಟಕ ಹೇಳಿಕೆ

Yatindra Siddaramaiah: ಸಿದ್ದರಾಮಯ್ಯ ಇದೊಂದು ಕೆಲಸ ಮಾಡಿದ್ರೆ, ಪೂರ್ಣಾವಧಿ ಸಿಎಂ ಆಗಿರ್ತಾರೆ !! ಪುತ್ರ ಯತೀಂದ್ರನ ಸ್ಪೋಟಕ ಹೇಳಿಕೆ

1 comment
Yatindra Siddaramaiah

Yatindra Siddaramaiah: ರಾಜ್ಯದಲ್ಲಿ ಸಿಎಂ ಖುರ್ಚಿಯ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಕೆಲವರು ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಅಂದರೆ ಮತ್ತೆ ಕೆಲವರು ಎರಡೂವರೆ ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ, ಮತ್ತೆರಡು ವರ್ಷ ಡಿಕೆ ಶಿವಕುಮಾರ್ ಸಿಎಂ ಎಂದು ಹೇಳುತ್ತಿದ್ದಾರೆ. ಆದರೂ ಈ ಗೊಂದಲಕ್ಕೆ ಇದೂವರೆಗೂ ತೆರೆ ದೊರೆತಿಲ್ಲ. ಆದೀಗ ಸಿದ್ದರಾಮಯ್ಯ ಅವರ ಸಿಎಂ ಅಧಿಕಾರಾವಧಿ ಕುರಿತು ಮಗ ಯತೀಂದ್ರ (Yatindra Siddaramaiah)ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಹೌದು, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಯತೀಂದ್ರನ ಸಿದ್ದರಾಮಯ್ಯ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament election)ಕಾಂಗ್ರೆಸ್ ಗೆದ್ದರೆ, ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಇದರಿಂದ 5ವರ್ಷವೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Women Pension Rules : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬೊಂಬಾಟ್ ಸುದ್ದಿ; 50 ವರ್ಷದಿಂದ ಮನೆಯಲ್ಲೇ ಕುಳಿತು ಪಡೆಯಿರಿ ಪಿಂಚಣಿ!!

ಸದ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದೆಂದು ನೋಡಬೇಕಾಗಿದೆ.

You may also like

Leave a Comment