ರಾತ್ರಿ ಪ್ರಯಾಣದ ಸಮಯದಲ್ಲಿ ರೈಲಿನಲ್ಲಿ ಜೋರಾಗಿ ಮಾತನಾಡುವುದು, ಗಲಾಟೆ ಮಾಡುವುದು, ಹಾಡುಗಳನ್ನು ಕೇಳಬಾರದು. ಇವು ಉಳಿದ ಪ್ರಯಾಣಿಕರಿಗೆ ತೊಂದರೆ ನೀಡುತ್ತದೆ. ಇದಕ್ಕಾಗಿಯೇ ಭಾರತೀಯ ರೈಲ್ವೇ ಕೆಲವು ನಿಯಮ ಮಾಡಿದೆ. ಈ ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಹಾಗೆನೇ ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ರಾತ್ರಿ ಗರಿಷ್ಠ 9 ಗಂಟೆಗಳ ಕಾಲ ನಿದ್ರೆ ಮಾಡಬಹುದಿತ್ತು. ಆದರೆ ಇದೀಗ ಈ ಸಮಯವನ್ನು 8 ಗಂಟೆಗೆ ಇಳಿಕೆ ಮಾಡಲಾಗಿದೆ. ಎಸಿ ಕೋಚ್ಗಳು ಮತ್ತು ಸ್ಪೀಪರ್ಗಳ ಪ್ರಯಾಣಿಕರು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿದ್ದೆ ಮಾಡಬಹುದಿತ್ತು. ಈಗ ಮಲಗುವ ಸಮಯವನ್ನು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮಾಡಲಾಗಿದೆ. ಸ್ಲೀಪರ್ ಸೌಲಭ್ಯ ಹೊಂದಿರುವ ಎಲ್ಲಾ ರೈಲುಗಳಿಗೂ ಈ ಬದಲಾವಣೆ ಅನ್ವಯವಾಗಲಿದೆ.
ಇದನ್ನೂ ಓದಿ: Bengaluru ಹೋಟೆಲ್ಗೆ ಬಂದ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದ ಕಾಮುಕ! ನೋಡಿ ಖುಷಿಪಟ್ಟ ಉಳಿದಿಬ್ಬರು, ಮುಂದೇನಾಯ್ತು ಗೊತ್ತೇ?
ಹೊಸ ನಿಯಮಗಳು; ಮೊಬೈಲ್ನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಸಂಗೀತವನ್ನು ಜೋರಾಗಿ ಕೇಳಬಾರದು, 10 ಗಂಟೆಯ ನಂತರ ಸಣ್ಣ ದೀಪಗಳನ್ನು ಉರಿಸಬೇಕು. ಅದು ಬಿಟ್ಟು ಬೇರೆ ದೀಪ ಉರಿಯಲು ಅವಕಾಶವಿಲ್ಲ. ಆನ್ಲೈನ್ ಊಟವನ್ನು ರಾತ್ರಿ 10 ಗಂಟೆಯ ನಂತರ ನೀಡಲಾಗುವುದಿಲ್ಲ. ಧೂಮಪಾನ, ಮದ್ಯಪಾನ ನಿಷೇಧ
