Home » Ayyappa Devotees dead : ಕಪಿಲೆಯಲ್ಲಿ ಸ್ನಾನಕ್ಕೆ ಇಳಿದಾಗ ದುರಂತ; ಮೂವರು ಅಯ್ಯಪ್ಪ ಭಕ್ತರು ನೀರು ಪಾಲು!!

Ayyappa Devotees dead : ಕಪಿಲೆಯಲ್ಲಿ ಸ್ನಾನಕ್ಕೆ ಇಳಿದಾಗ ದುರಂತ; ಮೂವರು ಅಯ್ಯಪ್ಪ ಭಕ್ತರು ನೀರು ಪಾಲು!!

1 comment
Ayyappa Devotees dead

Ayyappa Devotees dead : ನಂಜನಗೂಡು ಸಮೀಪ ಕಪಿಲಾ ನದಿಯಲ್ಲಿ ಸ್ನಾನಕ್ಕೆಂದು ನೀರಿಗಿಳಿದ ಅಯ್ಯಪ್ಪ ಭಕ್ತರಲ್ಲಿ ಮೂವರು ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿ (Shabarimale Ayyappa swami) ದರ್ಶನಕ್ಕಾಗಿ ವ್ರತ ಹಿಡಿದು ಮಾಲಾಧಾರಿಗಳಾಗಿದ್ದ ಮೂವರು ಅಯ್ಯಪ್ಪ ಭಕ್ತರು (Ayyappa Devotees) ನದಿಯಲ್ಲಿ ನೀರುಪಾಲಾದ(Three Ayyappa devotees dead)ದಾರುಣ ಘಟನೆ ವರದಿಯಾಗಿದೆ.

ಇದನ್ನೂ ಓದಿ: Sullia: ಗುಂಪಿನಿಂದ ಬೇರ್ಪಟ್ಟು ಜನವಸತಿ ಪ್ರದೇಶದಲ್ಲಿ ಬಾಕಿಯಾದ ಮರಿಯಾನೆ!!!

ನಂಜನಗೂಡಿಗೆ ಹೆಜ್ಜಿಗೆ ಸೇತುವೆ ಬಳಿ ಕಪಿಲಾ ನದಿಯಲ್ಲಿ ಸ್ನಾನಕ್ಕೆ ಇಳಿದ ಐವರು ಭಕ್ತರಲ್ಲಿ ಮೂವರು ನೀರು ಪಾಲಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಎಲ್ಲ ಅಯ್ಯಪ್ಪ ಭಕ್ತರು ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದವರಾಗಿದ್ದು, ನಂಜನಗೂಡಿನಲ್ಲಿ ಕಪಿಲೆಯಲ್ಲಿ ಸ್ನಾನ ಮಾಡುವ ಸಂದರ್ಭ ದುರಂತ ಸಂಭವಿಸಿದೆ.ನೀರುಪಾಲಾದ ಅಪ್ಪು, ರಾಕೇಶ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಬ್ಬರು ನಾಪತ್ತೆಯಾಗಿದ್ದು ಹುಡುಕಾಟ ನಡೆಯುತ್ತಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment