Home » RRB Assistant Loco Pilot: ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ:5696 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅಧಿಸೂಚನೆ ಬಿಡುಗಡೆ; ಇಂದೇ ಅರ್ಜಿ ಸಲ್ಲಿಸಿ!!

RRB Assistant Loco Pilot: ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ:5696 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅಧಿಸೂಚನೆ ಬಿಡುಗಡೆ; ಇಂದೇ ಅರ್ಜಿ ಸಲ್ಲಿಸಿ!!

1 comment
RRB ALP Recruitment 2024

RRB Assistant Loco Pilot Job Notification 2024 : ಉದ್ಯೋಗಾಂಕ್ಷಿಗಳೇ ಗಮನಿಸಿ, ಭಾರತೀಯ ರೈಲ್ವೆಯು 5696 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.

ಭಾರತೀಯ ರೈಲ್ವೆ ಇಲಾಖೆಯು ಬರೋಬ್ಬರಿ 5696 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ( RRB Assistant Loco Pilot Job Notification 2024 out for 5696 posts)ಮಾಡಿದೆ. ಈ ಹುದ್ದೆಗಳಿಗೆ ಮೆಟ್ರಿಕ್ಯೂಲೇಷನ್‌ / ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಪಾಸಾದವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನು ಓದಿ: Karkala: ಕರಾವಳಿ ‘ಕಂಬಳ’ ಪ್ರಾಣಿ ಹಿಂಸೆ, ಅದಕ್ಕೆ ಯಾರೂ ಬೆಂಬಲ ನೀಡಬೇಡಿ – ಜೈನ ಮುನಿಗಳಿಂದ ಶಾಕಿಂಗ್ ಹೇಳಿಕೆ !!

ಹುದ್ದೆಗಳ ವಿವರ:
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ
ಹುದ್ದೆ ಹೆಸರು : ಅಸಿಸ್ಟಂಟ್‌ ಲೋಕೋ ಪೈಲಟ್
ಹುದ್ದೆಗಳ ಸಂಖ್ಯೆ : 5696
ಬೇಸಿಕ್ ಪೇ: ರೂ.19900.
(INR 19900 to 63200 /Month)
ವೆಬ್‌ಸೈಟ್‌ ವಿಳಾಸ : www.rrbbnc.gov.in

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 20-01-2024 ಆರಂಭಿಕ ದಿನವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 19-02-2024 ಕೊನೆಯ ದಿನವಾಗಿದೆ.

ಅರ್ಹತಾ ಮಾನದಂಡಗಳು:
* ಈ ಹುದ್ದೆಗೆ ಅಭ್ಯರ್ಥಿಗಳು ಮೆಟ್ರಿಕ್ಯೂಲೇಷನ್‌ / ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಅನ್ನು ಅಂಗೀಕೃತ ಸಂಸ್ಥೆಗಳಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಪಡೆದು ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ ವಯೋಮಿತಿ 30 ವರ್ಷ ಮೀರಿರಬಾರದು.
* ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ ವಿವರ
ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರೂ.500 ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.250. ಆಗಿದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ www.rrbbnc.gov.in ವೆಬ್‌ಸೈಟ್‌ ವಿಳಾಸ ಭೇಟಿ ನೀಡಬೇಕಾಗಬಹುದು.

You may also like

Leave a Comment