Home » Santan Rally ವೇಳೆ ಕಿಡಿಗೇಡಿಗಳಿಂದ ದಾಳಿ; ಧಾರ್ಮಿಕ ಧ್ವಜ ಹರಿದು ವಿಕೃತಿ!!

Santan Rally ವೇಳೆ ಕಿಡಿಗೇಡಿಗಳಿಂದ ದಾಳಿ; ಧಾರ್ಮಿಕ ಧ್ವಜ ಹರಿದು ವಿಕೃತಿ!!

1 comment
Santan Rally

Sanatan Rally: ಅಯೋಧ್ಯೆಯಲ್ಲಿ (Ayodhya)ಇಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆ(Ayodhya Pran Prathishta) ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಭಕ್ತರು ಸನಾತನ ಮೆರವಣಿಗೆ (Sanatan Rally)ನಡೆಸುತ್ತಿದ್ದಾರೆ. ಈ ನಡುವೆ, ಮುಂಬೈನಲ್ಲಿ (Mumabi)ನಡೆದ ಸನಾತನ ಮೆರವಣಿಗೆ ವೇಳೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ಧ್ವಜವನ್ನು ಹರಿದುಹಾಕಿರುವ ಘಟನೆ ನಡೆದಿದೆ.

ಇದನ್ನೂ ಓದಿ: Sania Mirza: ಶೋಯೆಬ್‌ ಮಲಿಕ್‌ಗೆ ʼಖುಲಾʼ ನೀಡಿದ ಸಾನಿಯಾ!!! ಏನಿದು ಖುಲಾ? ತಲಾಕ್‌ಗಿಂತ ಇದು ಎಷ್ಟು ಭಿನ್ನ?

ಸನಾತನ ಯಾತ್ರೆ ನಡೆಸುತ್ತಿರುವ ಜನರು ಧಾರ್ಮಿಕ ಧ್ವಜವನ್ನು ಹಿಡಿದು ಶಾಂತಿಯುತವಾಗಿ ಸಾಗುತ್ತಿದ್ದರು ಎನ್ನಲಾಗಿದೆ. ಮುಂಬೈನ ಭಾಯಂದರ್‌ನಲ್ಲಿ ಸನಾತನ ಧರ್ಮ ಯಾತ್ರೆ ಹೊರಡುವಾಗ ಗಲಾಟೆ ನಡೆದಿದೆ ಎನ್ನಲಾಗಿದೆ. ತಮ್ಮ ಕಾರಿನಲ್ಲಿ ರಾಮ ಮತ್ತು ಹನುಮಂತನ ಧ್ವಜಗಳೊಂದಿಗೆ ಸಾಗುತ್ತಿದ್ದ ಜನರು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗುತ್ತಿದ್ದ ಸಂದರ್ಭ ದುಷ್ಕರ್ಮಿಗಳು ದೊಣ್ಣೆಗಳನ್ನು ಹಿಡಿದು ಬಂದು ಕಾರುಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಲಿಗೊಳಿಸಿದ್ದಾರೆ ಎನ್ನಲಾಗಿದೆ. ಈ ಮೆರವಣಿಗೆ ವೇಳೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

You may also like

Leave a Comment