Home » Belagavi: ‘ಜೈ ಶ್ರೀರಾಮ್’ ಘೋಷಣೆ ಕೂಗಿದವರ ಮೇಲೆ ಯುವಕರಿಂದ ಕಲ್ಲು ತೂರಾಟ !!

Belagavi: ‘ಜೈ ಶ್ರೀರಾಮ್’ ಘೋಷಣೆ ಕೂಗಿದವರ ಮೇಲೆ ಯುವಕರಿಂದ ಕಲ್ಲು ತೂರಾಟ !!

0 comments
Belagavi

Belagavi: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅನೇಕ ರಾಮ ಭಕ್ತರು ರಾಮನ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ. ಎಲ್ಲೆಡೆ ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿವೆ. ಹೀಗೆ ಬೆಳಗಾವಿಯಲ್ಲೂ ಸಂಭ್ರಮಿಸುವಾಗ ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದೆ.

ಹೌದು, ಬೆಳಗಾವಿಯ(Belagavi) ಪಾಟೀಲ ಗಲ್ಲಿಯಲ್ಲಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿರುವ ಘಟನೆ ನಡೆದಿದೆ. ಈ ಘಟನೆಯಿಂದ ಕೆಲಹೊತ್ತು ಆತಂಕ ಉಂಟಾಗಿತ್ತು.

ಇದನ್ನೂ ಓದಿ: Rama’s darshan time: ಭಕ್ತಾದಿಗಳೇ ಗಮನಿಸಿ – ಇಲ್ಲಿದೆ ನೋಡಿ ಅಯೋಧ್ಯೆ ರಾಮ ದರ್ಶನ ನೀಡುವ ಸಮಯ !!

ಅಂದಹಾಗೆ ಪಾಟೀಲ ನಗರದಲ್ಲಿ ಜೈಶ್ರೀರಾಮ(Jai shri ram) ಎಂದು ಘೋಷಣೆ ಕೂಗುತ್ತಾ ಒಂದು ಯುವಕರ ಗುಂಪು ಹೊರಟಿತ್ತು. ಈ ಯುವಕರ ಗುಂಪಿನ ಮೇಲೆ ಮತ್ತೊಂದು ಗುಂಪಿನ ಯುವಕರಿಂದ ಕಲ್ಲು ತೂರಾಟ ನಡೆಸಲಾಗಿದೆ. ಆಗ ಘೋಷಣೆ ಕೂಗುತ್ತಿದ್ದ ಯುವಕರೂ ಕೂಡ ಪ್ರತಿಯಾಗಿ ಕಲ್ಲು ತೂರಿದ್ದಾರೆ. ತಕ್ಷಣವೇ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರಿಂದ(Police) ಲಘು ಲಾಠಿ ಚಾರ್ಜ್ ಮಾಡಲಾಗಿದೆ. ಬಳಿಕ ತಕ್ಷಣವೇ ‌ಸ್ಥಳದಿಂದ ಕಾಲ್ಕಿತ್ತು ಎರಡು ಗುಂಪಿನ ಯುವಕರು ಪರಾರಿಯಾಗಿದ್ದಾರೆ.

You may also like

Leave a Comment