Home » Mangaluru News: ಸಿಎ ಓದುತ್ತಿದ್ದ ಯುವಕ ದಿಢೀರ್‌ ನೇಣಿಗೆ ಶರಣು!!!

Mangaluru News: ಸಿಎ ಓದುತ್ತಿದ್ದ ಯುವಕ ದಿಢೀರ್‌ ನೇಣಿಗೆ ಶರಣು!!!

0 comments

Mangalore News: ಕರಂಗಲ್ಪಾಡಿ ನಿವಾಸಿ ಕಾರ್ಲ್‌ ಲಾರೆನ್ಸ್‌ ಅರಾನ್ಹ (23) ಎಂಬವವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಸಿಎ ಓದುತ್ತಿದ್ದ ಈ ಯುವಕ ಜೊತೆಗೆ ಮ್ಯೂಚ್ವಲ್‌ ಫಂಡ್‌ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ಸೋಮವಾರ ಷೇರ್‌ ಮಾರ್ಕೆಟ್‌ ರಜೆ ಇದ್ದುದರಿಂದ ಮನೆಯಲ್ಲೇ ಇದ್ದ ಲಾರೆನ್ಸ್‌ ಮಧ್ಯಾಹ್ನ ಊಟ ಮಾಡಿ ತನ್ನ ಕೊಠಡಿಗೆ ಹೋಗಿದ್ದ ಎನ್ನಲಾಗಿದೆ. ಆದರೆ ಸಂಜೆ ಆಗುವವರೆಗೂ ಮನೆಯಿಂದ ವಾಪಸ್‌ ಬರದೇ ಇದ್ದುದರಿಂದ ಬಾಗಿಲು ಬಡಿದರೂ ಹೊರ ಬರಲಿಲ್ಲ.

ಫೋನ್‌ ಮಾಡಿದರೆ ಸ್ವಿಚ್‌ ಆಫ್‌ ಆಗಿತ್ತು. ಸಂಜೆ ಸುಮಾರು ಏಳು ಗಂಟೆಯವರೆಗೂ ಹೊರಗೆ ಬಂದಿದ್ದ ಎಂದು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಬೆಡ್‌ಶೀಟನ್ನು ಕಿಟಕಿಗೆ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ವರದಿಯಾಗಿದೆ.

ತನ್ನ ತಂದೆಯ ಜೊತೆ ಸೇರಿ ಮ್ಯೂಚುವರಲ್‌ ಫಂಡ್‌ ಸೇರಿದಂತೆ ಷೇರು ಮಾರ್ಕೆಟ್‌ನಲ್ಲಿ ಬಿಸಿನೆಸ್‌ ಮಾಡಿಕೊಂಡಿದ್ದ. ಸಾವಿಗೇನು ಕಾರಣ ಎಂದು ತಿಳಿದು ಬಂದಿಲ್ಲ. ಡೆತ್‌ನೋಟ್‌ ಕೂಡಾ ಕಂಡು ಬಂದಿಲ್ಲ ಎಂದು ವರದಿಯಾಗಿದೆ.

You may also like

Leave a Comment