Home » VIP Security ಪಡೆಯುತ್ತಿರುವ ಕೋಳಿ; ಈ ಕೋಳಿಗಿರುವ ಡಿಮ್ಯಾಂಡ್ ಕೇಳಿದರೆ ಶಾಕ್ ಆಗ್ತೀರಾ!!

VIP Security ಪಡೆಯುತ್ತಿರುವ ಕೋಳಿ; ಈ ಕೋಳಿಗಿರುವ ಡಿಮ್ಯಾಂಡ್ ಕೇಳಿದರೆ ಶಾಕ್ ಆಗ್ತೀರಾ!!

0 comments

VIP security : ನಾವೆಲ್ಲ ರಾಜಕಾರಣಿಗಳು ಸೆಲೆಬ್ರೆಟಿಗಳು, ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೆ ಭದ್ರತೆ ನೀಡುವುದನ್ನು ಕೇಳಿರುತ್ತೀರಿ!! ಆದರೆ, ಸಾಮಾನ್ಯ ಕೋಳಿಯೊಂದು ದಿನದ 24 ಗಂಟೆ ಪಂಜಾಬ್ ಪೊಲೀಸ್ ಭದ್ರತೆ ಪಡೆಯುತ್ತಿದೆಯಂತೆ. ಪೊಲೀಸರು ಪ್ರತಿ ದಿನ ಕೋಳಿಯನ್ನು(Chiken)ಆರೈಕೆ ಮಾಡುತ್ತಾ, ಶಿಫ್ಟ್ ರೀತಿಯಲ್ಲಿ ದಿನದ 24 ಗಂಟೆ ಸೂಕ್ತ ಭದ್ರತೆ( VIP security) ನೀಡುತ್ತಿದ್ದಾರೆ. ಆದರೆ ಸಾಮಾನ್ಯ ಕೋಳಿ ವಿಐಪಿ ಆಗಿದ್ದು ಹೇಗೆ ಅಂತೀರಾ??

 

ಪಂಜಾಬ್‌ನ(Punjab)ಬಾಥಿಂದ ಗ್ರಾಮದಲ್ಲಿನ ಕೋಳಿ ಇದೀಗ ಇದೇ ಗ್ರಾಮದಲ್ಲಿರುವ ಬಾಥಿಂದ ಪೊಲೀಸ್ ಠಾಣೆಯಲ್ಲಿ ವಿಐಪಿಯಾಗಿದೆ. ಕಾಕ್‌‌ಫೈಟ್(Cock Fight)ಎಂದು ಖ್ಯಾತಿ ಪಡೆದ ಕೋಳಿ ಅಂಕವನ್ನು ಬಾಥಿಂದ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

Bigil Actress Indraja: ಬಿಗಿಲ್‌ ಖ್ಯಾತಿ ನಟಿಯ ಅಮ್ಮನಿಂದ ಅಳಿಯನಿಗೆ ಲಿಪ್‌ಕಿಸ್‌ ; ನೆಟ್ಟಿಗರಿಂದ ಟೀಕೆ

ಈ ಮಾಹಿತಿ ಪಡೆದ ಪೊಲೀಸರು ನೇರವಾಗಿ ದಾಳಿ ನಡೆಸಿದ್ದು,ಕೋಳಿ ಅಂಕ ಆಯೋಜಕ ಸೇರಿದಂತೆ ಮೂವರು ಆರೋಪಿಗಳ ಪೈಕಿ ಒರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ಒಂದು ಕೋಳಿ ಹಾಗೂ 12 ಟ್ರೋಫಿಗಳನ್ನು ವಶಪಡಿಸಿಕೊಳ್ಳಲಾಗಿದೆಯಂತೆ.

 

ಈ ನಡುವೆ,ಪೊಲೀಸರು ಕೋಳಿ ಅಂಕ ಪ್ರಕರಣದಲ್ಲಿ ಬಂಧಿತ ಓರ್ವ ಆರೋಪಿ, ಕೋಳಿ ಹಾಗೂ 12 ಟ್ರೋಫಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.

New Reality Show : ಸದ್ಯದದಲ್ಲೇ ಬರ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್…

ಪೊಲೀಸರ ವಶದಲ್ಲಿರುವ ಈ ಕೋಳಿಗೆ ಇದೀಗ ಭದ್ರತೆ ನೀಡುವ ಅನಿವಾರ್ಯತೆ ಪಂಜಾಬ್ ಪೊಲೀಸರಿಗೆ ಎದುರಾಗಿದೆ. ಕೋಳಿ ಅಂಕದ ಕೋಳಿಗೆ ಪಂಜಾಬ್‌ನಲ್ಲಿ ಬಾರಿ ಬೇಡಿಕೆಯಿರುವ ಹಿನ್ನೆಲೆ ಪೊಲೀಸರ ಕಣ್ತಪ್ಪಿಸಿ ಕೋಳಿಯನ್ನು ಕದ್ದೊಯ್ಯುವ ಸಂಭವ ಹೆಚ್ಚಿರುವ ಹಿನ್ನೆಲೆ ಸೂಕ್ತ ಭದ್ರತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿ ಈ ಕೋಳಿಗೆ ಕಾಳು ಸೇರಿದಂತೆ ಆಹಾರ ನೀಡಲಾಗುತ್ತಿದ್ದು, ದಿನದ 24 ಗಂಟೆ ಕೋಳಿಗೆ ಭದ್ರತೆ ನೀಡಲಾಗುತ್ತದೆ.

You may also like

Leave a Comment