Home » Arun yogiraj: ರಾಮನ ಮೂರ್ತಿ ಕೆತ್ತುವಾಗ ಪ್ರತೀ ದಿನವೂ ಒಂದು ಕೋತಿ ಬರುತ್ತಿತ್ತು, ಬಂದು ಏನು ಮಾಡ್ತಿತ್ತು ಅಂದ್ರೆ… !! ಅಚ್ಚರಿ ಸಂಗತಿ ಬಿಚ್ಚಿಟ್ಟ ಅರುಣ್ ಯೋಗಿರಾಜ್

Arun yogiraj: ರಾಮನ ಮೂರ್ತಿ ಕೆತ್ತುವಾಗ ಪ್ರತೀ ದಿನವೂ ಒಂದು ಕೋತಿ ಬರುತ್ತಿತ್ತು, ಬಂದು ಏನು ಮಾಡ್ತಿತ್ತು ಅಂದ್ರೆ… !! ಅಚ್ಚರಿ ಸಂಗತಿ ಬಿಚ್ಚಿಟ್ಟ ಅರುಣ್ ಯೋಗಿರಾಜ್

1 comment
Arun yogiraj

Arun yogiraj: ಅಯೋಧ್ಯೆಯ (Ayodhay) ರಾಮಮಂದಿರದಲ್ಲಿ ಬಾಲರಾಮನ (Balarama) ಪ್ರಾಣಪ್ರತಿಷ್ಠಾಪನೆಯಾಗಿದೆ. ಈ ಮೂಲಕ ಕೋಟ್ಯಾಂತರ ಹಿಂದೂಗಳ ಕನಸು ನೆರವೇರಿದೆ. ಈ ಬಾಲರಾಮನ ವಿಗ್ರಹ ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ಮೂಡಿ ಬಂದಿದೆ. ಅರುಣ್ ಅವರ ಕೈ ಚಳಕಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೀಗ ಮೂರ್ತಿ ಕೆತ್ತನೆ ವೇಳೆ ಆದ ಕೆಲವೊಂದು ರೋಚಕ ಅನುಭವಗಳನ್ನು ಯೋಗಿರಾಜ್ ಅವರು ತೆರೆದಿಡುತ್ತಿದ್ದಾರೆ.

ಇದನ್ನೂ ಓದಿ: Udupi Bank Jobs: ಉಡುಪಿ ಕೋ-ಅಪರೇಟಿವ್‌ ಟೌನ್‌ ಬ್ಯಾಂಕ್‌ ಲಿ., ನಲ್ಲಿ ಉದ್ಯೋಗ! ಈ ಕೂಡಲೇ ಅರ್ಜಿ ಸಲ್ಲಿಸಿ!!!

ವಿಗ್ರಹ ಪೂರ್ಣವಾದ ಬಳಿಕ ಒಂದು ಕಾರ್ಯಗಾರಕ್ಕೆ ಕೊಡಲಾಗಿತ್ತು. ದೇವಸ್ಥಾನಕ್ಕೆ ಎಂಟ್ರಿ ಕೊಡುವಾಗಲೇ ವಿಗ್ರಹ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳಲು ಆರಂಭಿಸಿತು. ಕೊನೆಗೆ ಪ್ರತಿಷ್ಠಾಪನೆಯಾಗಿ ಅಲಂಕಾರವೆಲ್ಲಾ ಆದ್ಮೇಲೆ ಇದು ನಾನು ಮಾಡಿದ ವಿಗ್ರಹ ಅಲ್ಲ. ಇದು ನನ್ನ ಕೆಲಸ ಅಲ್ಲ. ದೇವರೇ ಈ ಕೆಲಸ ಮಾಡಿಕೊಂಡಿದ್ದಾರೆ ನನ್ನ ಅನುಭವಕ್ಕೆ ಎಂದು ಭಕ್ತಾದಿಗಳೆಲ್ಲರನ್ನು ರೋಮಾಂಚನಗೊಳಿಸಿದ್ದರು. ಇದೀಗ ನಾನು ಮೂರ್ತಿ ಕೆತ್ತುವಾಗ ಪ್ರತೀ ದಿನವೂ ಹನುಮಂತ ರಾಮಲಲ್ಲನ ದರ್ಶನಕ್ಕೆ ಬರುತ್ತಿದ್ದು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ರಾಮನ ಮೂರ್ತಿಯ ಕೆತ್ತನೆ ವೇಳೆ ದಿನವೂ ಕೆತ್ತನೆ ಮಾಡುತ್ತಿದ್ದ ಸ್ಥಳಕ್ಕೆ ಕೋತಿಯೊಂದು ಬಂದು ರಾಮನ ಮೂರ್ತಿಯನ್ನು ನೋಡಿಕೊಂಡು ಹೋಗುತ್ತಿತ್ತಂತೆ , ಪ್ರತಿದಿನವೂ ಮೂರ್ತಿ ಕೆತ್ತನೆ ಸ್ಥಳಕ್ಕೆ ಹನುಮ ಬಂದು ರಾಮನ ಮೂರ್ತಿಯ ಕೆತ್ತನೆ ಕಾರ್ಯವನ್ನು ನೋಡಿಕೊಂಡು ಹೋಗುತ್ತಿದ್ದ ಎಂದು ಅರುಣ್ ಯೋಗಿರಾಜ್ ಹೇಳಿದ್ದಾರೆ. ಪ್ರತಿದಿನ ಸಂಜೆ 4 ರಿಂದ 5 ಗಂಟೆ ಸುಮಾರಿಗೆ ಕೋತಿಯೊಂದು ರಾಮಲಲ್ಲಾ ನ ಮೂರ್ತಿಯನ್ನು ನೋಡಲು ಆಗಮಿಸುತ್ತಿತ್ತು. ನಾವು ಮೂರ್ತಿಗೆ ಕರ್ಟನ್‌ ಹಾಕುತ್ತಿದ್ದೆವು. ಆದರೂ ಈ ಕೋತಿ ರಾಮಲಲ್ಲಾನ ದರ್ಶನ ಪಡೆಯಲು ಬರುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಬಹುಶಃ ಹನುಮನಿಗೂ ಮೂರ್ತಿಯನ್ನು ನೋಡಬೇಕು ಎನಿಸುತ್ತಿತ್ತೋ ಏನೋ ಅದು ಪ್ರತಿದಿನವೂ ತಾನು ಕೆತ್ತನೆ ಮಾಡುತ್ತಿದ್ದ ಮೂರ್ತಿಯ ಬಳಿ ಬಂದು ಹೋಗುತ್ತಿತ್ತು.

You may also like

Leave a Comment