Home » Madhyapradesh ಕಾಂಗ್ರೆಸ್ ಪಾಳಯದಲ್ಲಿ ಮಾರಾಮಾರಿ- ಸಿಕ್ಕ ಸಿಕ್ಕ ವಸ್ತುಗಳಿಂದಲೇ ಬಡಿದಾಡಿಕೊಂಡ ರಾಜ್ಯದ ಪ್ರಬಲ ‘ಕೈ’ ನಾಯಕರು – ವಿಡಿಯೋ ವೈರಲ್

Madhyapradesh ಕಾಂಗ್ರೆಸ್ ಪಾಳಯದಲ್ಲಿ ಮಾರಾಮಾರಿ- ಸಿಕ್ಕ ಸಿಕ್ಕ ವಸ್ತುಗಳಿಂದಲೇ ಬಡಿದಾಡಿಕೊಂಡ ರಾಜ್ಯದ ಪ್ರಬಲ ‘ಕೈ’ ನಾಯಕರು – ವಿಡಿಯೋ ವೈರಲ್

0 comments
Madhyapradesh

Madhyapradesh: ಲೋಕಸಭಾ ಚುನಾವಣೆ ಹತ್ತಿರ ಆದಂತೆ ಕಾಂಗ್ರೆಸ್ ನಲ್ಲಿ ಭಾರಿ ಅಸಮಾಧಾನ ಕಂಡುಬರುತ್ತಿದೆ. ಕೆಲವೊಂದು ವಿಚಾರಗಳಂತೂ ದೇಶಾದ್ಯಂತ ಕೈ ನಾಯಕರಿಗೆ ಮುಜುಗರ ತರುವಂತಹ ಸಂಗತಿಗಳೂ ಆಗಿವೆ. ಇದೀಗ ಇಂತದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲೆ ನಡೆದಿದ್ದು ಕೈ ನಾಯಕರ ನಡುವೆ ಮಾರಾಮಾರಿ ಉಂಟಾಗಿದೆ. ಸಿಕ್ಕ ಸಿಕ್ಕ ವಸ್ತುಗಳಿಂದಲೇ ಬಡಿದಾಡಿಕೊಂಡಿದ್ದಾರೆ.

https://x.com/NarendraSaluja/status/1751903378773602637?t=XGAk3-6jFw9JeIPV-kGa7A&s=08

ಹೌದು, ಮಧ್ಯಪ್ರದೇಶದಲ್ಲಿ(Madhyapradesh) ಕಾಂಗ್ರೆಸ್‌ನ ಎರಡು ಬಣಗಳು ಬೇಕಾಬಿಟ್ಟಿ ಬಡಿದಾಡಿಕೊಂಡಿವೆ. ಸಿಕ್ಕ ಸಿಕ್ಕ ವಸ್ತುಗಳಿಂದಲೇ ಹೊಡೆದಾಡಿದ್ದು, ಕುರ್ಚಿ ಕೈಯಲ್ಲಿ ಹಿಡಿದು ಮಾರಾಮಾರಿ ನಡೆಸಿದೆ. ಈ ವೇಳೆ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧವೂ ಅವಾಚ್ಯಶಬ್ದಗಳಿಂದ ನಿಂದಿಸಿ ಒಬ್ಬರ ಮೇಲೊಬ್ಬರು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋವನ್ನು ಮಧ್ಯಪ್ರದೇಶ ಬಿಜೆಪಿ ನಾಯಕ ನರೇಂದ್ರ ಸಾಲುಜ ಅವರು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಅಂದಹಾಗೆ ನರೇಂದ್ರ ಸಾಲುಜ(Narendra saluja) 2 ವಿಡಿಯೋ ಹಂಚಿಕೊಂಡಿದ್ದು, ಒಂದರಲ್ಲಿ ಕಾಂಗ್ರೆಸ್ ನಾಯಕರು ಬಡಿದಾಡಿಕೊಳ್ಳುವ ದೃಶ್ಯವಿದೆ. ಇದರಲ್ಲಿ ಓರ್ವ ನಾಯಕ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಕುರ್ಚಿ ಹಿಡಿದು ಜಗಳಕ್ಕೆ ನಿಂತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ನಾಯರ ಗುಂಪುಗಳು ಅವಾಚ್ಯ ಶಬ್ದಗಳಿಂದ ಜರೆಯುತ್ತಿರುವ ದೃಶ್ಯವಿದೆ. ರಾಜ್ಯದ ಪ್ರಬಲ ನಾಯಕ ಕಾಂಗ್ರಸ್ ವಕ್ತಾರ ಶಹರ್ಯಾರ್ ಖಾನ್ ಸೇರಿದಂತೆ ಕೆಲ ನಾಯಕರು ಬಡಿದಾಟಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ವಿಡಿಯೋ ಹಂಚಿಕೊಂಡ ನೇರೇಂದ್ರ ಅವರು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್(Kamala nathan) ಬೆಂಬಲಿಗರು ದಿಗ್ವಿಜಯ್ ಸಿಂಗ್(Digvijay singh) ಬಣದ ನಾಯಕರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದಿಗ್ವಿಜಯ್ ಸಿಂಗ್ ವಿರುದ್ಧವೂ ಘೋಷಣೆ ಕೂಗಿದ್ದಾರೆ ಎಂದು ಹೇಳಿದ್ದಾರೆ.

You may also like

Leave a Comment