Home » Gnanavapi Masjid: ಹಿಂದೂಗಳ ಹೋರಾಟಕ್ಕೆ ಭರ್ಜರಿ ಜಯ – ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಕೋರ್ಟ್ ಅನುಮತಿ !!

Gnanavapi Masjid: ಹಿಂದೂಗಳ ಹೋರಾಟಕ್ಕೆ ಭರ್ಜರಿ ಜಯ – ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಕೋರ್ಟ್ ಅನುಮತಿ !!

0 comments

Gnanavapi Masjid: ಅಯೋಧ್ಯೆಯ ರಾಮ ಮಂದಿರ ಬೆನ್ನಲ್ಲೇ ದೇಶದ ಹಿಂದೂಗಳ ಚಿತ್ತ ವಾರಣಾಸಿಯ ಜ್ಞಾನವಾಪಿ ಮಸೀದಿ ಮೇಲೆ ನಟ್ಟಿತ್ತು. ಇದೀಗ ಈ ಹೋರಾಟಕ್ಕೆ ಭರ್ಜರಿ ಜಯ ದೊರಕಿದ್ದು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಕೋರ್ಟ್ ಅನುಮತಿ ನೀಡಿದೆ.

ಹೌದು, ವಾರಾಣಸಿಯ ಜ್ಞಾನವಾಪಿ ಮಸೀದಿ(Gnanavapi Masjid) ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಸರ್ವೆ ವರದಿ ಬಹಿರಂಗಪಡಿಸಿತ್ತು. ಇಲ್ಲಿ ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ಪಾಲಿಗೆ ದೊಡ್ಡ ಜಯ ಸಿಕ್ಕಿದ್ದು ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ವಾರಣಾಸಿ ಕೋರ್ಟ್ ಅವಕಾಶ ನೀಡಿದೆ.

ಇಷ್ಟೇ ಅಲ್ಲದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜ್ಞಾನವಾಪಿ ಸಮೀಕ್ಷೆಯ ವರದಿಯು ಪರಿಗಣಿಸಲು ಯೋಗ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

You may also like

Leave a Comment