Home » CBSE 9 ನೇ ತರಗತಿಯ ಪಠ್ಯದಲ್ಲಿ ಡೇಟಿಂಗ್ ಪಾಠ!!!

CBSE 9 ನೇ ತರಗತಿಯ ಪಠ್ಯದಲ್ಲಿ ಡೇಟಿಂಗ್ ಪಾಠ!!!

1 comment
CBSE

 

ನವದೆಹಲಿ: ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಡೇಟಿಂಗ್ ಮತ್ತು ಅದರ ಸಂಬಂಧಗಳ ಕುರಿತ ವ್ಯತ್ಯಾಸವನ್ನು ಅರ್ಥವಾಗುವಂತೆ ನೀಡಲಾಗಿದೆ. ಈ ಪಾಠದಲ್ಲಿ ಘೋಸ್ಟಿಂಗ್‌, ಕ್ಯಾಟ್‌ಫಿಶಿಂಗ್ ಮತ್ತು ಸೈಬರ್‌ಬುಲ್ಲಿಂಗ್ ಎಂಬ ಆಧುನಿಕ ಪದಗಳನ್ನು ಕೂಡ ನೀಡಲಾಗಿದೆ.

ಇದನ್ನೂ ಓದಿ: Rishabh Pant: ಅಪಘಾತದ ಕುರಿತು ಪಂತ್ ಶಾಕಿಂಗ್ ಹೇಳಿಕೆ!

9ನೇ ತರಗತಿಯ ಸಿಬಿಎಸ್ಸಿಯ ಪಠ್ಯಕ್ರಮದಲ್ಲಿ ಡೇಟಿಂಗ್ ಮತ್ತು ರಿಲೇಷನ್‌ಷಿಪ್‌ಗಳ (ನಿಮ್ಮನ್ನು ಮತ್ತು ಇತರ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವುದು) ಅಧ್ಯಾಯವನ್ನು ಒಳಗೊಂಡಿರುವ ಸ್ಕ್ರೀನ್ ಶಾಟ್ ಒಂದು ವೈರಲಾಗಿದೆ. ಈ ಅಧ್ಯಾಯವು 9ನೇ ತರಗತಿಯ ಪುಸ್ತಕದಲ್ಲಿ ಇರುವುದು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟುಮಾಡಿದೆ. ಡೇಟಿಂಗ್ ಮತ್ತು ರಿಲೇಷನ್‌ಷಿಪ್‌ಗಳ ಸೂಕ್ಷ್ಮ ವ್ಯತ್ಯಾಸವನ್ನು ವಿದ್ಯಾರ್ಥಿಗೆ ಅರ್ಥವಾಗುವಂತೆ ಮಾಡುವುದರ ಜೊತೆಗೆ, ಅಧ್ಯಾಯವು ‘ಘೋಸ್ಟಿಂಗ್‌’, ‘ಕ್ಯಾಟ್‌ಫಿಶಿಂಗ್’ ಮತ್ತು ‘ಸೈಬರ್‌ಬುಲ್ಲಿಂಗ್’ ಸೇರಿದಂತೆ ಆಧುನಿಕ ಡೇಟಿಂಗ್ ಪದಗಳನ್ನೂ ವಿವರಿಸಿದೆ. ಎಕ್ಸ್ ಖಾತೆಯ ಮೂಲಕ ಖುಷಿ ಎಂಬುವವರು ಇದನ್ನು ಹಂಚಿಕೊಂಡಿದ್ದು ಅವರ ಪೋಸ್ಟ್ ಗೆ ಸಾಕಷ್ಟು ತಮಾಷೆಯ ಕಾಮೆಂಟ್ ಗಳು ಬಂದಿವೆ.

ಹದಿಹರೆಯ ವಯಸ್ಸಿನಲ್ಲಿ ಈ ಪಠ್ಯ ಬೇಕಿತ್ತ ಎಂಬ ಪ್ರಶ್ನೆ ಹುಟ್ಟಿದೆ. ಇದು ಹಾರ್ಟ್ ಬ್ರೇಕ್ ಸಂಗತಿಯಾಗಿದೆ. ಈ ವಯಸ್ಸಿನ ಅವಧಿಯಲ್ಲಿ ಬ್ರೇಕ್ ಆಫ್ ಮತ್ತು ರಿಜೆಕ್ಷನ್ ಗಳ ಬಗೆಗೆ ಸಾಮಾನ್ಯ ಜ್ಞಾನವನ್ನು ಹೊಂದಿರುವುದಿಲ್ಲ. ವಯಸ್ಕರು ಇದರಿಂದ ಸುಲಭವಾಗಿ ಹೊರಬಂದು ತಮ್ಮ ಗರಿಯ ಕಡೆಗೆ ನಡೆಯುತ್ತಾರೆ. ಹದಿಹರೆಯದವರಿಗೆ ಇದು ಸಾಕಷ್ಟು ನಷ್ಟವನ್ನು ಉಂಟುಮಾಡಬಹುದು. ಅವರ ಮನಸ್ಸಿನಲ್ಲಿ ಧೀರ್ಘಕಾಲದ ವರೆಗೆ ಉಳಿದು ಗಾಯಮಾಡಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.

ಇದರ ಜೊತೆಗೆ ಇದು ವೇಗವಾಗಿ ವೈರಲ್ ಹಾಗುವ ಮೂಲಕ 7 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದೆ. ಈ ಕುರಿತ ಪರ ವಿರೋಧ ಚರ್ಚೆಗಳು ಕಾಮೆಂಟ್ ಬಾಕ್ಸ್ ನಲ್ಲಿ ಜೋರಾಗಿದೆ ನಡೆದಿವೆ. ಇದು ಸಿಬಿಎಸ್ಸಿ ಸ್ಕೂಲ್ ಗಳಲ್ಲಿ ಮಾತ್ರ ಹೀಗೆ. ಶಿಕ್ಷಕರು ಸಂತಾನೋತ್ಪತ್ತಿಯ ಪಾಠವನ್ನು ಮುಂದೆ ಹಾಕಿ ಬಿಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಜನರೇಷನ್‌ ಝಡ್‌ ಜಮಾನ, ಏನ್‌ ಬೇಕಾದರೂ ನಡೆಯಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಕೋರ್ಸಿಗೆ ನಾವು ಎಲ್ಲಿ ಅಡ್ಮಿಷನ್ ಪಡೆಯಬೇಕು. ಇಂದಿನ ಮಕ್ಕಳಿಗೇ ಲವ್ ಕ್ರಷ್ ಗಳು ಇರುತ್ತವೆ ನಾವು ಮಾತ್ರ ಒಂಟಿಯಾಗಿ ಇದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

You may also like

Leave a Comment