Home » Poonam pandey: ನಟಿ ಪೂನಂ ಪಾಂಡೆ ಸಾವಿಗೆ ಬಿಗ್ ಟ್ವಿಸ್ಟ್!!

Poonam pandey: ನಟಿ ಪೂನಂ ಪಾಂಡೆ ಸಾವಿಗೆ ಬಿಗ್ ಟ್ವಿಸ್ಟ್!!

0 comments
Poonam pandey

Poonam pandey: ತನ್ನ ಬೋಲ್ಡ್ ಲುಕ್ ಹಾಗೂ ಕೆಲವು ವಿವಾದಗಳಿಂದಲೇ ಸದ್ಧು ಮಾಡುತ್ತಿದ್ದ ನಟಿ ಪೂನಂ ಪಾಂಡೆ (Poonam Pandey) ಇನ್ನು ನೆನಪು ಮಾತ್ರ. ಗರ್ಭಕಂಠಕ ಕ್ಯಾನ್ಸರ್ ನಿಂದ ಅತಿ ಚಿಕ್ಕ ವಯಸ್ಸಿನಲ್ಲೇ ನಟಿ ಸೃವನ್ನಪ್ಪಿದ್ದು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಈ ಬೆನ್ನಲ್ಲೇ ಪೂನಂ ಸಾವಿಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.

ಇದನ್ನೂ ಓದಿ: Vinay guruji: ಅಣ್ಣಾ ಮಲೈ ರಾಜಕೀಯ ಜೀವನದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ವಿನಯ್ ಗುರೂಜಿ!!

ಹೌದು, ಪೂನಂ ಪಾಂಡೆ ಸಾವೀಗೀಡಾಗಿದ್ಧು ಗರ್ಭಕಂಠಕ ಕ್ಯಾನ್ಸರ್ ನಿಂದಾಗಿ ಎಂದು ವರದಿಯಾಗಿದೆ. ಆದರೀಗ ನಟಿಯ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪೂನಂ ಕ್ಯಾನ್ಸರ್‌ನಿಂದ ಸಾವಾಗೀಡಾಗಿಲ್ಲ, ಡ್ರಗ್ ಓವರ್ ಡೋಸ್‌ನಿಂದ ಸಾವಾಗಿದೆ ಅನ್ನೋ ಮಾಹಿತಿಗಳೂ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪೂನಂ ಪಾಂಡೆಯ ಸಾವಿನ ಸುತ್ತ ಅನುಮಾನಗಳು ಜೋರಾಗಿವೆ.

ಅಂದಹಾಗೆ ಚಿಕಿತ್ಸೆ ವೇಳೆ ನೀಡಿದ ಔಷದಿ ಓವರ್ ಡೋಸ್‌ನಿಂದ ಪೂನಂ ಪಾಂಡೆ ಮೃತಪಟ್ಟಿದ್ದಾಳೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಮಾಹಿತಿಗಳು ಅಧಿಕೃತವಾಗಿಲ್ಲ. ಯಾವ ಔಷಧಿ, ಯಾವ ಚಿಕಿತ್ಸೆ ಪಡೆಯುತ್ತಿದ್ದರೂ, ಪೂನಂ ಗರ್ಭಕಂಠ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರೇ? ಅನ್ನೋದು ದೃಢಪಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಡ್ರಗ್ ಓವರ್ ಡೋಸ್‌ನಿಂದ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿಗಳು ಹೆಚ್ಚಾಗಿ ಹರಿದಾಡುತ್ತಿದೆ.

ಕುಟುಂಬದಿಂದ ಯಾವುದೇ ಮಾಹಿತಿ ಇಲ್ಲ:
ಪೂನಂ ಸತ್ತ ವಿಚಾರ ಸೋಷಿಯಲ್ ಮೀಡಿಯಾಗಳಿಂದ ಲಭ್ಯವಾಗಿದೆಯೇ ವಿನಃ ನಟಿಯ ನಿಧನ ಸುದ್ದಿ ಕುರಿತು ಆಸ್ಪತ್ರೆ ಮೂಲಗಳಿಂದಾಗಲಿ, ಪೂನಂ ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಹೀಗಾಗಿ ಸಾಕಷ್ಟು ಅನುಮಾನಗಳು ಎದ್ದುನಿಂತಿವೆ.

 

 

You may also like

Leave a Comment