Home » Crime News: ತಂಗಿ ಮದುವೆಗಿಟ್ಟ ಆಭರಣ ಕದ್ದ ಅಕ್ಕ; ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿದ ಈಕೆ ನೀಡುವ ಕಾರಣ ಇಲ್ಲಿದೆ!!!

Crime News: ತಂಗಿ ಮದುವೆಗಿಟ್ಟ ಆಭರಣ ಕದ್ದ ಅಕ್ಕ; ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿದ ಈಕೆ ನೀಡುವ ಕಾರಣ ಇಲ್ಲಿದೆ!!!

1 comment
Crime News

ಮಹಿಳೆಯೊಬ್ಬಳು ತನ್ನ ತಂಗಿಯ ಮದುವೆಗೆಂದು ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕದ್ದು ಇದೀಗ ಪೊಲೀಸ್‌ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದೊಂದು ವಿಚಿತ್ರ ಪ್ರಕರಣವೆಂದೇ ಹೇಳಬಹುದು.

ಇದನ್ನೂ ಓದಿ: Hampi Utsav: ಕರ್ನಾಟಕ ಕಾಂಗ್ರೆಸ್‌ ಸರಕಾರದ ಉದಾರ ನೀತಿ ಮುಂದುವರಿಕೆ; ಬಾಡಿಗೆ ಕಟ್ಟುವುದು ಬೇಡ ಎಂದ ಜಮೀರ್‌ ಅಹ್ಮದ್‌!!

ದೆಹಲಿಯ ಉತ್ತಮ್‌ ನಗರದ ಮನೆಯೊಂದರಲ್ಲಿ ಕಳ್ಳತನವಾಗಿದ್ದು, ಈ ಕುರಿತು ದೂರು ದಾಖಲಾಗಿತ್ತು. ದೂರು ದಾಖಲಿಸಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ಮಾಡಿದಾಗ ಮನೆಯೊಳಗೆ ಬಲವಂತವಾಗಿ ಕಳ್ಳ ಪ್ರವೇಶಿಸಿದ ಯಾವುದೇ ಕುರುಹುಗಳು ಕಂಡಿಲ್ಲ. ಅಲ್ಲದೆ ಮನೆಯಲ್ಲಿನ ಎಲ್ಲಾ ವಸ್ತುಗಳು ಅಲ್ಲಲ್ಲೇ ಇದ್ದವು, ಚೆಲ್ಲಾಪಿಲ್ಲಿಯಾಗಿದ್ದು ಕಂಡು ಬಂದಿಲ್ಲ. ಇದರಿಂದ ಪೊಲೀಸರು ಅನುಮಾನಗೊಂಡು ಮನೆಯ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

 

ಸಿಸಿ ಕ್ಯಾಮರೆದಾದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ವರ್ತಿಸಿದ್ದು ಕಂಡು ಬಂದಿದೆ. ಇದರ ಬೆನ್ನ ಹಿಂದೆ ಬಿದ್ದಾಗ ಆ ಮಹಿಳೆ ಕಳ್ಳತನವಾದ ಮನೆಯ ಹಿರಿಯ ಮಗಳು ಶ್ವೇತಾ. ಈಕೆಯನ್ನು ವಿಚಾರಣೆ ಮಾಡಿದ ಎಲ್ಲಾ ವಿಷಯ ಬಾಯ್ಬಿಟ್ಟಿದ್ದಾಳೆ.

 

ಈಕೆ ತಾನೇ ಚಿನ್ನಾಭರಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಅಲ್ಲದೆ ತನ್ನ ತಾಯಿ ನನಗಿಂತ ಜಾಸ್ತಿ ತಂಗಿಯನ್ನು ಪ್ರೀತಿಸುತ್ತಿದ್ದು, ಆಕೆಯ ಮೇಲಿನ ಅಸೂಯೆಯಿಂದ ಮದುವೆಗೆಂದು ತೆಗೆದಿಟ್ಟಿದ್ದ ಆಕೆಯ ಚಿನ್ನಾಭರಣಗಳನ್ನು ಕದಿಯುವ ನಿರ್ಧಾರಕ್ಕೆ ಬಂದೆ ಎಂದು ಪೊಲೀಸರಲ್ಲಿ ಹೇಳಿದ್ದಾಳೆ.

 

ಇದೀಗ ಪೊಲೀಸರು ಮಹಿಳೆಯ ಬಳಿ ಇದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಕೆಲವೊಂದು ಆಭರಣಗಳನ್ನು ತುರ್ತು ಹಣದ ಅವಶ್ಯಕತೆಗೆ ಮಾರಿದ್ದಾಗಿಯೂ ಹೇಳಿದ್ದಾಳೆ.

 

ತನ್ನ ಪರಿಚಯ ಯಾರಿಗೂ ಸಿಗಬಾರದೆಂದು ಈಕೆ ಸಾರ್ವಜನಿಕ ಶೌಚಾಲಯದಲ್ಲಿ ಬುರ್ಖಾ ಧರಿಸಿ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಕೀ ಬಳಸಿ ಕಳ್ಳತನ ನಡೆಸಿ ಪರಾರಿಯಾಗಿದ್ದಳು. ಈ ಕಳ್ಳತನದ ವಿಷಯ ಬೆಳಕಿಗೆ ಬಂದಾಗ ತಾಯಿಯ ಜೊತೆ ಏನೂ ಗೊತ್ತಿಲ್ಲದ ರೀತಿಯಲ್ಲಿ ವರ್ತನೆ ಮಾಡಿರುವುದಾಗಿ ವರದಿಯಾಗಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಇನ್ನೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

You may also like

Leave a Comment