Home » Bigg Boss kannada OTT: ಬಿಗ್‌ಬಾಸ್‌ ಕನ್ನಡಕ್ಕೆ ಟಿಆರ್‌ಪಿ ಮಹಾಪೂರ!! ಶುರುವಾಗಲಿದೆ ಬಿಗ್ ಬಾಸ್ ಒಟಿಟಿ ಆವೃತ್ತಿ!!

Bigg Boss kannada OTT: ಬಿಗ್‌ಬಾಸ್‌ ಕನ್ನಡಕ್ಕೆ ಟಿಆರ್‌ಪಿ ಮಹಾಪೂರ!! ಶುರುವಾಗಲಿದೆ ಬಿಗ್ ಬಾಸ್ ಒಟಿಟಿ ಆವೃತ್ತಿ!!

1 comment

Bigg Boss kannada OTT: ಕನ್ನಡ ಭಾಷೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಯಶಸ್ವಿಯಾಗಿ ಮುಗಿದಿದೆ. ಇದೀಗ ಬಿಬಿಕೆಯಲ್ಲಿ ಒಟಿಟಿ ಆವೃತ್ತಿ ಆರಂಭವಾಗುವ ಸಾಧ್ಯತೆ ಇದೆ ಗಾಸಿಪ್ ಶುರುವಾಗಿದೆ. ಬಿಗ್ ಬಾಸ್ ಗೆ ಉತ್ತಮ ಟಿಆರ್ಪಿ ಬಂದಿರುವುದರಿಂದ ಒಟಿಟಿ ಅವೃತಿ ಆರಂಭಿಸಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: EPFO: ಮಹಿಳಾ ಉದ್ಯೋಗಿಗಳಿಗೆ ಇಪಿಎಫ್‌ಒದಿಂದ ಸಂದೇಶ, ಸರಕಾರ ಏನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಿದೆ?

ಬೆಂಗಳೂರು: ಬಿಗ್ ಬಾಸ್ ಕನ್ನಡವು ಒಟಿಟಿ ಆವೃತಿ ಬರಲಿದೆ ಎಂದು ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯನ್ನು ಮತ್ತೆ ಕಲರ್ ಫುಲ್ ಮಾಡುತ್ತಿರುವುದು ಇದರ ಮುನ್ಸೂಚನೆ ಎನ್ನಲಾಗಿದೆ. ಆದರೆ ಸುದೀಪ್ ಬಿಝಿ ಶೆಡ್ಯೂಲ್ ನಡುವೆ ಬಿಗ್ ಬಾಸ್ ಪಂಚಾಯತಿಗೆ ಬರುವುದು ಡೌಟ್ ಆಗಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ಭರ್ಜರಿ ಟಿಆರ್‌ಪಿ ದೊರಕಿರುವುದರಿಂದ ಒಟಿಟಿ ಆವೃತ್ತಿ ಆರಂಭಿಸುವ ಸಾಧ್ಯತೆ ಇದೆ ಎಂದು ಟಿವಿ9 ವರದಿ ತಿಳಿಸಿದೆ. ಬಿಗ್ ಬಾಸ್ ಕನ್ನಡದ 2022 ರಲ್ಲಿ ಒಟಿಟಿಯಲ್ಲಿ ಪ್ರಸಾರವಾಗಿತ್ತು. ಬಿಗ್ ಬಾಸ್ ಮಿನಿ ಆವೃತ್ತಿಯಲ್ಲಿ 16 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಟಾಪ್ 4 ನೇರವಾಗಿ ಬಿಗ್ ಬಾಸ್ 9 ನೆಯ ಅವೃತಿಗೆ ಆಯ್ಕೆಯಾಗಿದ್ದರು. ಬಿಗ್ ಬಾಸ್ ಕನ್ನಡ ಒಟಿಟಿ ಯಲ್ಲಿ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ.

ಈ ವರ್ಷದ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರವಾಯಿತು. ಆನ್ ಸೀನ್ ವಿಡಿಯೋ ನೋಡುವ ಅವಕಾಶ ಇದರಿಂದ ದೊರೆಯಿತು.

ಬಿಗ್ ಬಾಸ್ ಕನ್ನಡ ಒಟಿಟಿ ಆವೃತ್ತಿ ಶುರುವಿನ ಬಗ್ಗೆ ಜಿಯೋ ಸಿನಿಮಾದಿಂದ ಯಾವುದೇ ಮಾಹಿತಿ ಬಂದಿಲ್ಲ. ಮುಂದೆ ಈ ಬಗ್ಗೆ ಮಾಹಿತಿ ದೊರೆಯಲಿದೆ. ಬಿಗ್ ಬಾಸ್ 10 ಸೀಸನ್ ಅನೇಕ ಕಾರಣಗಳಿಂದ ಸುದ್ದಿಯಲ್ಲಿತ್ತು.ಸ್ಪರ್ಧಿಗಳ ಜಗಳ, ಆಟದ ರೀತಿಯು ಚರ್ಚೆಗೆ ಕಾರಣವಾಗಿತ್ತು. ಆದರೆ, ಇದೇ ಸಮಯದಲ್ಲಿ ಬಿಗ್‌ಬಾಸ್‌ಗೆ ಭರ್ಜರಿ ಟಿಆರ್‌ಪಿ ದೊರಕಿತ್ತು.

ಬಿಗ್ ಬಾಸ್ 10 ರಲ್ಲಿ ಕಾರ್ತಿಕ್ ಗೌಡ ಗೆದ್ದು, ಮೊದಲನೇ ರನ್ನರ್ ಆಫ್ ಆಗಿ ಡ್ರೋನ್ ಪ್ರತಾಪ್ ಎರಡನೇ ರನ್ನರ್ ಆಫ್ ಆಗಿ ಸಂಗೀತಾ, ಮೂರನೇ ರನ್ನರ್ ಆಫ್ ಆಗಿ ವಿನಯ್ ಯಾಗಿದ್ದಾರೆ.ಈಗಾಗಲೇ ಬಿಗ್‌ಬಾಸ್‌ ಕನ್ನಡ 10 ಟಿವಿ ಆವೃತ್ತಿ ಮುಗಿದಿರುವುದರಿಂದ ಒಟಿಟಿ ಆವೃತ್ತಿ ಸ್ವರೂಪ ಬೇರೆ ರೀತಿ ಇರುವ ಸಾಧ್ಯತೆ ಇರಲಿದೆ.

You may also like

Leave a Comment