Home » Rape: ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೋ ನೋಡಿ ತಂಗಿ ಮೇಲೆ ಅತ್ಯಾಚಾರ ಮಾಡಿ, ಕೊಂದ ಅಣ್ಣ

Rape: ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೋ ನೋಡಿ ತಂಗಿ ಮೇಲೆ ಅತ್ಯಾಚಾರ ಮಾಡಿ, ಕೊಂದ ಅಣ್ಣ

1 comment
Rape

Uttar Pradesh: 19 ವರ್ಷದ ಯುವಕನೋರ್ವ ತನ್ನ 17 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾಸ್ಗಂಜ್‌ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯರಿಗೆ 10ಸಾವಿರ ದಂಡ ವಿಧಿಸಿದ ಕೋರ್ಟ್‌

ತನ್ನ ಮೊಬೈಲ್‌ನಲ್ಲಿ ಈ ಯುವಕ ಅಶ್ಲೀಲ ವೀಡಿಯೊಂದನ್ನು ನೋಡಿ ತಂಗಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಫೆ.3 ರ ರಾತ್ರಿ ನಡೆದಿದೆ.

ಈ ಘಟನೆ ನಡೆದಾಗ ಇವರಿಬ್ಬರೇ ಮನೆಯಲ್ಲಿದ್ದು, ತಾಯಿ ಸಂಬಂಧಿಕರನ್ನು ಭೇಟಿ ಮಾಡಲೆಂದು ದೂರದ ಊರಿಗೆ ಹೋಗಿದ್ದರು ಎಂದು ವರದಿಯಾಗಿದೆ. ಪೊಲೀಸರು ಹೇಳಿರುವ ಪ್ರಕಾರ ಸಂಜು ಎಂಬ ಯುವಕ ಅಶ್ಲೀಲ ವೀಡಯೋ ನೋಡಿದ್ದು, ತನ್ನ ಪಕ್ಕದಲ್ಲಿ ಮಲಗಿದ್ದ ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ್ದನೆ. ತಾನು ಮಾಡಿದ್ದನ್ನು ನಂತರ ಯಾರಿಗಾದರೂ ಹೇಳಬಹುದು ಎಂಬ ಭಯದಿಂದ ಈತ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

You may also like

Leave a Comment