Dakshina Kannada: ಮಂಗಳೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಎರಡು ದಿನ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಫೆ.10,11 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಥೈಲ್ಯಾಂಡ್, ಉಕ್ರೇನ್, ಇಂಡೋನೇಷಿಯಾ, ವಿಯೆಟ್ನಾ, ಮಲೇಷ್ಯಾ, ಎಸ್ಟೋನಿಯಾ, ಗ್ರೀಸ್ ಮತ್ತು ಸ್ಪೀಡನ್ ಎಂಟು ದೇಶಗಳು ಪಾಲ್ಗೊಳ್ಳಲಿದೆ.
ಗಾಳಿಪಟ ಉತ್ಸವ ಶನಿವಾರ ಸಂಜೆ 3 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. 8 ಗಂಟೆಯ ನಂತರ ಲೈಟ್ ಬೆಳಕಿನಲ್ಲಿ ಗಾಳಿಪಟ ಹಾರಾಟ ನಡೆಯಲಿದೆ. ಗಾಳಿಪಟ ಮಾರಾಟದ ಜೊತೆಗೆ ಸ್ಥಳೀಯರಿಗೂ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲು ಸ್ಥಳೀಯರಿಗೂ ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಗಾಳಿಪಟ ಉತ್ಸವ ಪಣಂಬೂರು ಬೀಚ್‌ನಲ್ಲಿ ಐದು ಬಾರಿ ಆಯೋಜನೆ ಮಾಡಲಾಗಿತ್ತು. ಭಾರಿ ಜನರನ್ನು ಸೆಳೆದಿದ್ದ ಈ ಕಾರ್ಯಕ್ರಮ ಇದೀಗ ಆರನೇ ಬಾರಿಗೆ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದೆ. ಟೀಮ್ ಮಂಗಳೂರು ತಂಡದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ ಬಾನಂಚಲ್ಲಿ ಹಾರಲಿದೆ. ತಣ್ಣೀರು ಬಾವಿ ಬೀಚಿನಲ್ಲಿ ಎರಡು ಸಾವಿರ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪಣಂಬೂರು ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಮಂಗಳೂರು ಜನರು ಸುಲ್ತಾನ್ ಬತ್ತೇರಿಯಿಂದ ಫೆರಿ ಮೂಲಕ ತಣ್ಣೀರುಬಾವಿಗೆ ಬರುವಂತೆ ಆಯೋಜಕರು ಕೋರಿದ್ದಾರೆ.
ಮಂಗಳೂರು ತಂಡದ ಜೊತೆಗೆ ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತು ತೆಲಂಗಾಣದಿಂದ 22 ಕ್ಕೂ ಹೆಚ್ಚು ಭಾರತೀಯ ಗಾಳಿಪಟ ಹಾರಾಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಒಎನ್‌ಜಿಸಿ -ಎಂಆರ್‌ಪಿಎಲ್‌ನ ಜಿಲ್ಲಾಡಳಿತದ ಬೆಂಬಲದಿಂದ ತಂಡ ಮಂಗಳೂರು ಉತ್ಸವವನ್ನು ಆಯೋಜಿಸಿದೆ.
