Home » Udupi: ನಮಾಝ್‌ಗೆಂದು ಕುಳಿತಾಗಲೇ ಸ್ಥಳದಲ್ಲಿಯೇ ಹೃದಯಾಘಾತ; ವ್ಯಕ್ತಿ ಸಾವು

Udupi: ನಮಾಝ್‌ಗೆಂದು ಕುಳಿತಾಗಲೇ ಸ್ಥಳದಲ್ಲಿಯೇ ಹೃದಯಾಘಾತ; ವ್ಯಕ್ತಿ ಸಾವು

1 comment
Udupi

Udupi: ವ್ಯಕ್ತಿಯೊಬ್ಬರು ಜುಮಾ ನಮಾಝ್‌ಗೆಂದು ಕುಳಿತುಕೊಂಡಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆಯೊಂದು ಉಡುಪಿ ಜಿಲ್ಲೆಯ ಅಂಜುಮಾನ್‌ ಮಸೀದಿಯಲ್ಲಿ ನಡೆದಿದೆ.

ಇದನ್ನೂ ಓದಿ: Mithun Chakraborty: ಬಾಲಿವುಡ್ ನಟ ಮಿಥುನ್ ಚಕ್ರವರ್ತಿಗೆ ಎದೆನೋವು! ಆಸ್ಪತ್ರೆಗೆ ದಾಖಲು

ದೊಡ್ಡಣಗುಡ್ಡಯ ಕರಂಬಳ್ಳಿ ನಿವಾಸಿ ಮುಸ್ತಾಕ್‌ (55) ಎಂಬುವವರೇ ಮೃತ ವ್ಯಕ್ತಿ.

ಉಡುಪಿ ಸಿಟಿ ಬಸ್‌ ನಿಲ್ದಾಣ ಸಮೀಪದ ಅಂಜುಮಾನ್‌ ಮಸೀದಿಗೆ ಮುಸ್ತಾಕ್‌ ಅವರು ಬಂದಿದ್ದು, ಖುತ್ಬಾ ಕೇಳಲು ಕುಳಿತ ಸಂದರದಲ್ಲಿ ಅವರು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದು, ನಮಾಜ್‌ ಮಾಡುತ್ತಿದ್ದವರಿಗೆ ಮೊದಲು ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ನಂತರ ಯಾರೂ ಅವರತ್ತ ಗಮನಹರಿಸದೇ ತಮ್ಮಪಾಡಿ ತಾವು ನಮಾಜ್‌ ಮಾಡುತ್ತಿದ್ದರು. ಅನಂತರ ಅವರನ್ನು ಎಬ್ಬಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮುಸ್ತಾಕ್‌ ಅವರು ಮೇಲೇಳಲೇ ಇಲ್ಲ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತ ಹೊಂದಿರುವುದಾಗಿ ತಿಳಿದು ಬಂದಿದೆ.

You may also like

Leave a Comment