ಧಾರ್ಮಿಕ ಆಚರಣೆಗಳಿಂದ ಹಿಂದೂ ಸಮಾಜದಲ್ಲಿ ಒಗ್ಗಟ್ಟು .ಸಂಸ್ಕಾರ ಬೆಳೆಸಿಕೊಂಡಾಗ ಮಾತ್ರ ಬದುಕು ಚಲನಶೀಲವಾಗುತ್ತದೆ ಹಾಗೂ ನಮ್ಮನ್ನು ನಾವೇ ಅರಿತುಕೊಂಡಾಗ ಸಮಾಜದಲ್ಲಿ ದ್ವೇಷ ಮರೆಯಾಗಿ ಶಾಂತಿ ಸಹಬಾಳ್ವೆ ಬೆಳೆಯುತ್ತದೆ ಎಂದು ಶ್ರೀ ಗುರುದೇವಾನಂದ ಶ್ರೀಗಳು ಹೇಳಿದರು.
ಇದನ್ನೂ ಓದಿ: PMJJBY: ತಿಂಗಳಿಗೆ ಕೇವಲ 36 ರೂ.ಕಟ್ಟಿ. 2 ಲಕ್ಷ ವಿಮೆ ಪಡೆಯಿರಿ!!ಮೋದಿ ಸರ್ಕಾರದ ಅದ್ಭುತ ಯೋಜನೆ
ಫೆಬ್ರವರಿ 10 ರಂದು ಸಚ್ಚೇರಿಪೇಟೆಯ ಶ್ರೀ ಮಹಾಮಾಯಿ ಅಮ್ಮನವರ ಅಶ್ವಥ್ಥ ಕಟ್ಟೆಯಲ್ಲಿ ನಡೆದ 20 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜ ಮಹೋತ್ಸವದ ಸಂತ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮೂಡಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾಸ್ವಾಮೀಜಿ, ಶ್ರೀ ಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಜಂಗಮಮಠದ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮೀಗಳವರು ಮಾತನಾಡಿ, ಹಿಂದೂ ಸಮಾಜದ ಧರ್ಮ ಜಾಗೃತಿಗಾಗಿ ಈ ರೀತಿಯ ಸಂತ ಸಮಾವೇಶದ ಅಗತ್ಯತೆ ಇದೆ ಇಂದು ಕರೆ ನೀಡಿದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಶ್ರೀ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕೀರ್ತಿಶೇಷ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರ ಶ್ರೀ ಲಾತವ್ಯ ಆಚಾರ್ಯ ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ವರ್ಷಂಪ್ರತಿ ಕಾರ್ಯಕ್ರಮಕ್ಕೆ ಸಹಕರಿಸುವ ಬಾಲಕೃಷ್ಣ ಶೆಟ್ಟಿ ಪಾಲಿಂಗೇರಿ, ಅರುಣ್ ಭಂಡಾರಿ ಸಚ್ಚೇರಿಪೇಟೆ, ಸೇವಾಭಾರತಿ ಭಜನಾ ತಂಡದ ತರಬೇತುದಾರ ಶ್ರೀನಿವಾಸ ಪೂಜಾರಿ ಎರ್ಲಪಾಡಿ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ಸಚ್ಚೇರಿಪೇಟೆಯ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.
ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಶೆಣೈ ಬೈಲೂರು, ಉದ್ಯಮಿ ಭೋಜ ಸುವರ್ಣ ಸೂರತ್, ಉದ್ಯಮಿ ರವೀಂದ್ರ ಡಿ. ಪೂಂಜಾ, ಸಚ್ಚೇರಿಪೇಟೆ ಲಕ್ಷ್ಮೀ ವೆಂಕಟೇಶ ಭಜನಾ ಮಂದಿರದ ಅಧ್ಯಕ್ಷ ರಾಮಚಂದ್ರ ನಾಯಕ್, ಸಂಘಟಕ ಜಿತೇಂದ್ರ ಪೇರೂರು ಉಪಸ್ಥಿತರಿದ್ದರು.
ಭವಿಷ್ ಪ್ರಾರ್ಥಿಸಿ, ಸತೀಶ್ ಹೊಸ್ಮಾರ್ ಹಾಗೂ ಶಿಕ್ಷಕ ಸುಧೀರ್ ನಾಯಕ್ ನಿರೂಪಿಸಿದರು. ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ, ವಂದಿಸಿದರು.
