Home » Mallika Rajput: ಸಿಂಗರ್‌ ಮಲ್ಲಿಕಾ ರಜಪೂತ್‌ ಮನೆಯಲ್ಲೇ ನೇಣು ಬಿಗಿದು ಸಾವು

Mallika Rajput: ಸಿಂಗರ್‌ ಮಲ್ಲಿಕಾ ರಜಪೂತ್‌ ಮನೆಯಲ್ಲೇ ನೇಣು ಬಿಗಿದು ಸಾವು

0 comments

Mallika Rajput: ನಿನ್ನೆ ಮಂಗಳವಾರ ತಮ್ಮ ಮನೆಯಲ್ಲಿ ಗಾಯಕಿ ವಿಜಯಲಕ್ಷ್ಮೀ ಅಲಿಯಾಸ್‌ ಮಲ್ಲಿಕಾ ರಜಪೂತ್‌(Mallika Rajput) (35) ಅವರು ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

 

ಕೊತ್ವಾಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸೀತಾಕುಂಡ್‌ ಪ್ರದೇಶದ ತನ್ನ ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

 

ರಾತ್ರಿ ಈ ಘಟನೆ ನಡೆದಿರುವುದರಿಂದ ಯಾವಾಗ ಈ ಘಟನೆ ನಡೆದಿದೆ ಎಂದು ಗೊತ್ತಿಲ್ಲ ಎಂಬುವುದಾಗಿ ತಾಯಿ ಸುಮಿತ್ರಾ ಸಿಂಗ್‌ ಹೇಳಿದ್ದಾರೆ.

 

ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ವಿವರ ಗೊತ್ತಾಗಲಿದೆ ಎಂದು ಕೊತ್ವಾಲಿ ಪೊಲೀಸ್‌ ಠಾಣೆಯ ಅಧಿಕಾರಿ ಶ್ರೀರಾಮ್‌ ಪಾಂಡೆ ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿ ಕಾಣುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Hair Care: ನಿಮ್ಮ ಕೂದಲ ಸಮಸ್ಯೆಗೆ ಇಲ್ಲಿದೆ ರಾಮಬಾಣ!! ಈ ಎಣ್ಣೆ ಹಚ್ಚಿದರೆ ಸಾಕು

You may also like

Leave a Comment