Beetroot Stain: ಬೀಟ್‌ರೂಟ್ ಅನ್ನು ಹಚ್ಚುವುದರಿಂದ ನಮ್ಮ ಕೈ ಕೆಂಪಾಗುತ್ತದೆ. ನಮ್ಮ ಕೈ ಸೌಂದರ್ಯಕ್ಕೆ ಸಮಸ್ಯೆಯಾಗಿಯೂ ಕಾಣುವುದರಿಂದ ಹಲವು ಮಂದಿ ಬೀಟ್‌ರೂಟನ ಅಡುಗೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಅದೆಷ್ಟೇ ಪೋಷಕಾಂಶಗಳು ಹೊಂದಿದ್ದರು ಎಷ್ಟೇ ಒಳ್ಳೆಯ ಆಹಾರವೆಂದರೂ, ಬೀಟ್‌ರೂಟ್ ಗೆ ಕೈ ಹಾಕುವುದಿಲ್ಲ. ಹಾಗಾದರೆ, ಇದಕ್ಕೆ ಪರಿಹಾರ ಬೇಕಲ್ಲ . ಈಗ ಪರಿಹಾರವನ್ನು ನೋಡೋಣ.
ಪಿಂಕ್ ಬಣ್ಣದಿಂದ ಕೂಡಿದ ಬೀಟ್ ರೊಟ್ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವಾಗಿದೆ. ಆದರೆ, ಇದರ ಈ ಬಣ್ಣವೇ ಇದಕ್ಕೆ ಕೆಲವೊಮ್ಮೆ ಮುಳುವಾಗುತ್ತದೆ. ಇದರ ಬಣ್ಣವೇನೋ ನೋಡಲು ಚಂದ . ಅಡುಗೆ ಮಾಡಿದವರ, ಇದನ್ನು ಕತ್ತರಿಸಿದವರ ಕೈಯೆಲ್ಲ ಮೊದಲು ಕೆಂಪಣ್ಣಕ್ಕೆ ತಿರುಗಿ ಆಮೇಲೆ ಕಪ್ಪುಕಪ್ಪಾಗಿಬಿಡುತ್ತದೆ. ಈ ಕಪ್ಪಾದ ಕೈಗಳು ಮತ್ತೆ ಹಳೆಯ ನಿಜವಾದ ಸ್ಥಿತಿಗೆ ಬರಲು ಕೊಂಚ ಕಾಲವಾದರೂ ಬೇಕಾಗುತ್ತದೆ. ಇದೇ ಕಾರಣಕ್ಕೆ ಬಹಳ ಮಂದಿಗೆ ಬೀಟ್‌ರೂಟ್ ಅಂದರೆ ಅಷ್ಟಕ್ಕಷ್ಟೇ. ಹೊರಗೆ ದುಡಿಯುವ ಮಹಿಳೆಯರಿಗೆ, ಬೀಟ್‌ರೂಟನ ಅಡುಗೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಹಾಗಾದರೆ, ಇದಕ್ಕೊಂದು ಪರಿಹಾರ ಬೇಕಲ್ಲವೇ? ಅತ್ಯುತ್ತಮ ಪೋಷಕಾಂಶಗಳನ್ನ ಒಳಗೊಂಡ ಬೀಟ್‌ರೂಟಿನ ನಿರ್ಲಕ್ಷ್ಯ ಹೀಗೆ ಮಾಡುವುದೇ ಎನ್ನುವುದಕ್ಕೆ ಸರಳ ಸಲಹೆಗಳಿವೆ.
ಆಲೂಗಡ್ಡೆ
ಆಲೂಗಡ್ಡೆಗೂ ಬೀಟ್‌ರೂಟ್‌ಗೂ ತುಸು ಸಂಬಂಧ ಇದೆ. ಬೀಟ್‌ರೂಟ್‌ನಿಂದಾದ ಹಠಮಾರಿ ಕಲೆಗಳನ್ನು ಕೈಯಿಂದ ತೆಗೆಯಲು ಒಂದು ಆಲೂಗಡ್ಡೆಯನ್ನು ಕತ್ತರಿಸಿ ನೀರಿನಿಂದ ಕೈಯನ್ನು ಉಜ್ಜಿ ತೊಳೆಯಿರಿ. ಆಮೇಲೆ ನೀರಿನಿಂದ ಕೈ ತೊಳೆದುಕೊಳ್ಳಿ. ಸ್ವಚ್ಛವಾದ ಕೈಗಳಲ್ಲಿ ಕಲೆ ಮಾತ್ರವಲ್ಲ, ವಾಸನೆಯೂ ಹೊರಟುಹೋಗಿರುತ್ತದೆ.
ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾವನ್ನು ಸಹ ಬಳಸಬಹುದು. ಕೈಯಲ್ಲಿರುವ ಬೀಟ್‌ರೂಟ್ ಕಲೆಗೂ ಇದು ಅತ್ಯುತ್ತಮ ಮದ್ದಾಗಿದೆ. ಬಿಸಿ ನೀರನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು, ಅದಕ್ಕೆ ಒಂದು ಚಮಚದಷ್ಟು ಬೇಕಿಂಗ್ ಸೋಡ ಹಾಕಿ. ಕೆಲ ನಿಮಿಷ ಈ ಬೆಚ್ಚಗಿನ ಸೋಡಾ ನೀರಿನಲ್ಲಿ ಕೈಗಳನ್ನು ಮುಳುಗಿಸಿಡಿ. ಕಲೆಯೆಲ್ಲ ಮಂಗಮಾಯವಾಗಿರುತ್ತದೆ.
ಉಪ್ಪು
ಸ್ವಲ್ಪ ಉಪ್ಪನ್ನು ಕೈಗಳಲ್ಲಿ ತೆಗೆದುಕೊಂಡು ಕೈ ತೊಳೆಯಿರಿ. ಇದು ನೈಸರ್ಗಿಕ ಮಾರ್ಜಕದಂತೆ ಕೆಲಸ ಮಾಡುತ್ತದೆ. ಕೈಗೆ ಅಂಟಿದ ಕಲೆಯನ್ನು ತೆಗೆಯುತ್ತದೆ. ಬೀಟ್‌ರೂಟ್ ಕತ್ತರಿಸಿದ ಮೇಲೆ ಚೂರು ಉಪ್ಪು ಹಾಕಿ ಕೈಯನ್ನು ತೊಳೆಯಿರಿ.
ನಿಂಬೆಹಣ್ಣು
ಒಂದು ನಿಂಬೆಹಣ್ಣನ್ನು ಕತ್ತರಿಸಿ ಬೀಟ್‌ರೂಟ್ ಕಲೆಯಾದ ಕೈಗಳ ಮೇಲೆ ಚೆನ್ನಾಗಿ ಉಜ್ಜಿ ತೊಳೆದರೆ ಕಲೆ ಸುಲಭವಾಗಿ ಹೋಗುತ್ತದೆ. ಕೈಯಲ್ಲಿ ಒಂದು ಬಗೆಯ ಘಮವೂ ಮನೆ ಮಾಡುತ್ತದೆ. ಅಥವಾ ಒಂದು ಬಟ್ಟಲಿಗೆ ಬಿಸಿ ನೀರು ಹಾಕಿ ಅದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡಿ. ಅದರಲ್ಲಿ ಕೈಯನ್ನು ಮುಳುಗಿಸಿ ಒಂದೈದು ನಿಮಿಷ ಬಿಡಿ. ಕೈ ಸ್ವಚ್ಛವಾಗುತ್ತದೆ.
