Home » Crime News: ಪತ್ನಿಯ ತಲೆ ಕಡಿದು ಊರಿಡೀ ಸುತ್ತಾಡಿದ ಗಂಡ

Crime News: ಪತ್ನಿಯ ತಲೆ ಕಡಿದು ಊರಿಡೀ ಸುತ್ತಾಡಿದ ಗಂಡ

1 comment
Crime News

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಪಟಾಶ್‌ಪುರದಲ್ಲಿ ಬುಧವಾರ (ಫೆಬ್ರವರಿ 14) ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ಆಕೆಯ ಕತ್ತರಿಸಿದ ತಲೆಯನ್ನು ಹೊತ್ತುಕೊಂಡು ಪ್ರದೇಶದಲ್ಲಿ ತಿರುಗಾಡಿದ್ದಾನೆ.

ಇದನ್ನೂ ಓದಿ: Protection of banana: ಮನೆಗೆ ತಂದು ಬಾಳೆಹಣ್ಣು ಬೇಗ ಹಾಳಾಗುತ್ತಾ?! ಹಾಗಿದ್ರೆ ಈ ಟ್ರಿಕ್ಸ್ ಯೂಸ್ ಮಾಡಿ, ಎಷ್ಟು ದಿನ ಬೇಕಾದರೂ ಫ್ರೆಶ್ ಆಗಿ ಇಡಿ

ಆತನ ಹೆಸರು ಗೌತಮ್ ಗುಚೈತ್. ಸ್ಥಳೀಯರಿಂದ ಮಾಹಿತಿ ಪಡೆದ ಪಟಾಶಪುರ ಠಾಣೆ ಪೊಲೀಸರು ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಗೌತಮ್ ಗುಚೈತ್ ಮೊದಲು ತನ್ನ ಪತ್ನಿ ಫುಲ್ರಾಣಿ ಗುಚೈತ್‌ನ ಶಿರಚ್ಛೇದನದ ಮೂಲಕ ಕೊಲೆ ಮಾಡಿ ನಂತರ ಕತ್ತರಿಸಿದ ತಲೆ ಮತ್ತು ಕೊಲೆಗೆ ಬಳಸಿದ ಆಯುಧದೊಂದಿಗೆ ತನ್ನ ಮನೆಯಿಂದ ಹೊರಬಂದಿರುವುದಾಗಿ ವರದಿಯಾಗಿದೆ.

ವೃತ್ತಿಯಲ್ಲಿ ಬೀದಿ ಬದಿ ವ್ಯಾಪಾರಿಯಾಗಿರುವ ಗುಚೈತ್ ತನ್ನ ಪತ್ನಿಯೊಂದಿಗೆ ಕೆಲ ದಿನಗಳಿಂದ ಹದಗೆಟ್ಟ ಸಂಬಂಧ ಹೊಂದಿದ್ದ, ಈತನಿಗೆ ತನ್ನ ಹೆಂಡತಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯ ಇತ್ತು ಎನ್ನಲಾಗಿದೆ. ಗುಚೈತ್‌ಗೆ ಈ ಮದುವೆಯಿಂದ ಒಂದನೇ ತರಗತಿಯಲ್ಲಿ ಓದುವ ಮಗನಿದ್ದಾನೆ. ತುಂಡರಿಸಿದ ತಲೆ ಹಾಗೂ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಯ ಪೋಷಕರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಗುಚೈತ್‌ನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

You may also like

Leave a Comment