Home » Natural Fertilizer: ಅಡಿಕೆಗೆ ನೈಸರ್ಗಿಕ ಗೊಬ್ಬರ ಒದಗಿಸುವುದು ಹೇಗೆ!! ಇಲ್ಲಿದೆ ಸುಲಭ ಮಾರ್ಗ!!

Natural Fertilizer: ಅಡಿಕೆಗೆ ನೈಸರ್ಗಿಕ ಗೊಬ್ಬರ ಒದಗಿಸುವುದು ಹೇಗೆ!! ಇಲ್ಲಿದೆ ಸುಲಭ ಮಾರ್ಗ!!

1 comment
Natural Fertilizer

ನಮ್ಮಲ್ಲಿರುವ ಬಹುತೇಕ ರೈತರು ಅಡಿಕೆ ತೋಟವನ್ನು ಬಹಳ ಸ್ವಚ್ಛವಾಗಿ ಇಟ್ಟುಕೊಂಡಿರುತ್ತಾರೆ. ಅವರು ತಮ್ಮ ತೋಟದಲ್ಲಿ ಬೆಳೆಯುವ ತುಸು ಕಳೆಯನ್ನೂ, ಬಿದ್ದ ಗರಿಗಳನ್ನು ತೆರವುಗೊಳಿಸುತ್ತಾರೆ. ಈಗೆ ಮಾಡುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ತಿಳಿಯೋಣ

ಇದನ್ನೂ ಓದಿ: Arecanut Farming: ಅಡಿಕೆಗೆ ಎಷ್ಟು ದಿನಕ್ಕೊಮ್ಮೆ ನೀರು ಕೊಡಬೇಕು?? ನೀರು ಅತಿಯಾದರೆ ಈ ಕಾಯಿಲೆ ಬರುತ್ತದೆ.

ಪೂರ್ಣಚಂದ್ರ ತೇಜಸ್ವಿಯವರ ಹೇಳುವಂತೆ ನಾವು ಸಹಜ ಕೃಷಿಯನ್ನು ಮಾಡಬೇಕು. ಆಗ ಮಾತ್ರ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯ. ಆಗೆಯೇ ಅಡಿಕೆಯನ್ನು ಸಹ ಸಹಜ ಕೃಷಿಯ ಮೂಲಕ ಬೆಳೆಯಬಹುದು.

ಮೊದಲನೆಯದಾಗಿ ನಮ್ಮ ತೋಟದಲ್ಲಿ ಹುಟ್ಟುವ ಕಳೆಯನ್ನು ತೆಗೆಯದಿರುವುದು. ಉಳುಮೆ ಮಾಡದಿರುವುದು. ರಾಸಾಯನಿಕ ಗೊಬ್ಬರ ಬಳಸದೆ ಇರುವುದು. ಇವುಗಳನ್ನು ಅನುಸರಿಸಬೇಕು.

ನಮ್ಮ ತೋಟದಲ್ಲಿ ಬೆಳೆಯುವಂತಹ ಕಳೆಯಿಂದ ತುಂಬ ಉಪಯೋಗಗಳಿವೆ. ತೋಟದಲ್ಲಿ ಕಳೆ ಇದ್ದಷ್ಟು ತೋಟವು ಬಿಸಿಲಿನಿಂದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಕಳೆಯು ನೆಲವನ್ನು ಸದಾ ಮೃದುವಾಗಿ ಇಟ್ಟಿರುತ್ತದೆ. ಇದರಿಂದ 3, 4 ತಿಂಗಳಿಗೊಮ್ಮೆ ಹಳೆ ಕಳೆಯು ಸತ್ತು ಹೊಸ ಕಳೆಯು ಹುಟ್ಟುತ್ತದೆ. ಇದರಿಂದ ಬಿದ್ದ ಕಳೆ ಅಲ್ಲಿಯೇ ಕೊಳೆಯುತ್ತದೆ. ಕೊಳೆಯುವ ಸಂದರ್ಭದಲ್ಲಿ ಎರೆಹುಳುಗಳು ಹೆಚ್ಚಾಗುತ್ತವೆ. ನೆರಳು ಇದ್ದಷ್ಟು ಎರೆಹುಳುಗಳು ಹೆಚ್ಚಾಗುತ್ತವೆ. ಎರೆಹುಳುಗಳು ರೈತರ ಮಿತ್ರ.

ಅಡಿಕೆಯಿಂದ ಬರುವ ತ್ಯಾಜ್ಯಗಳು ಸಹ ಒಳ್ಳೆಯ ಗೊಬ್ಬರದ ಮೂಲವಾಗಿದೆ. ಕೆಲವರು ಅಡಿಕೆಯಿಂದ ಬರುವ ಗರಿಗಳು, ಕಂಕ್ಕಿಗಳನ್ನು ತೋಟದಿಂದ ಹೊರ ಹಾಕುತ್ತಾರೆ. ಇದು ಸೂಕ್ತವಾದದಲ್ಲ. ಈಗೆ ಮಾಡುವ ಮೂಲಕ ನಾವು ನೈಸರ್ಗಿಕ ಗೊಬ್ಬರವನ್ನು ವ್ಯರ್ಥ ಮಾಡುತ್ತಿದ್ದೇವೆ. ಈ ಪದ್ಧತಿಯನ್ನು ನಾವು ಮೊದಲು ಬಿಡಬೇಕು.

ಇನ್ನೂ ನಾವು ತೋಟವನ್ನು ಪದೇ ಪದೇ ಉಳುಮೆ ಮಾಡುವುದನ್ನು ನೋಡಿರುತ್ತೇವೆ. ಕೆಲವರು ಅತ್ಯಂತ ಆಳಕ್ಕೆ ತೋಟವನ್ನು ಉಳುಮೆ ಮಾಡುತ್ತಾರೆ. ಕೆಲವರು ಹೇಳುವಂತೆ ಉಳುಮೆ ಮಾಡುವುದರಿಂದ ಗಿಡದ ಬೇರುಗಳು ಕಟ್ಟಗುತ್ತವೆ. ಇದು ಗಿಡದ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುತ್ತಾರೆ.

ನಮ್ಮ ತೋಟದಲ್ಲಿ ಸಾಧ್ಯವಾದಷ್ಟು ಕಸ ಕಡ್ಡಿಗಳನ್ನು ಹಾಕಿ. ತೋಟವನ್ನು ಗರಿ, ಹಸಿರೆಲೆ ಗಳಿಂದ ಮುಚ್ಚಳಿಕೆ ಮಾಡಬೇಕು. ಇದರಿಂದ ಸಾಕಷ್ಟು ಲಾಭಗಳನ್ನು ಪಡೆಯಬಹುದಾಗಿದೆ.

You may also like

Leave a Comment