Mylaralingeshwara Karnika: ಕಳೆದ ವರ್ಷದಲ್ಲಿ ಸರಿಯಾಗಿ ಮಳೆ ಬೆಳೆ ಇಲ್ಲದೆ ಬೇಸತ್ತಿದ್ದ ರೈತರು ಗೊರವಪ್ಪ ಮಾತು ಕೇಳಿ ಈ ಬಾರಿ ಸಂತಸಗೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದಿರುವ ಮೈಲಾರಲಿಂಗ ದೇವರ ಜಾತ್ರೆಯಲ್ಲಿ ಸಿರಿನಾಡಿಗೆ ಬಂಗಾರದ ಗಿಳಿ ಬಂದು ಕೂತಿತಲೇ ಪರಾಕ್ ಎಂದು ಗೊರವಪ್ಪ ಹೇಳಿರುವುದು ಶುಭ ಸಂಕೇತವಾಗಿದೆ.
ಸಮಾರು 17 ಅಡಿ ಎತ್ತರದ ಕಂಬದ ಮೇಲೆ ನಿಂತು ಭವಿಷ್ಯವಾಣಿ ಹೇಳಿದ ಗೊರವಪ್ಪ. ಉತ್ತಮ ಮಳೆ ಬೆಳೆಯಾಗುವ ಸಾಧ್ಯತೆ ಇದೆ. ಕಾಯಕವೇ ಕೈಲಾಸ ಎನ್ನುವ ರೈತರಿಗೆ ಒಳ್ಳೆಯದಾಗಲಿದೆ. ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಗೊರವಪ್ಪ ನುಡಿದ ಕಾರ್ಣಿಕದ ಮಾತುಗಳನ್ನು ಕೇಳಿದ ಜನರು ಇದು ಶುಭ ಸೂಚನೆ ಎಂದು ಹೇಳಿದ್ದಾರೆ. ರೈತಗೆ ಉತ್ತಮ ಮಳೆ ಬೆಳೆ ಯಾಗುತ್ತದೆ ಎಂದು ಹೇಳಲಾಗಿದೆ.
ಕಾರ್ಣಿಕದ ಅರ್ಥವೇನೆಂದರೆ; ಇದರ ಒಟ್ಟಾರೆ ಅರ್ಥ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತದೆ. ರೈತರು ಚಿನ್ನದ ಬೆಳೆಯನ್ನು ಬೆಳೆಯುತ್ತಾರೆ. ನಮ್ಮ ರಾಜ್ಯ ಸಮೃದ್ದಿಯಾಗಿರುತ್ತದೆ ಎಂದು ಗೊರವಪ್ಪ ಹೇಳಿದ್ದಾರೆ. ಸುಮಾರು 17 ಅಡಿ ಎತ್ತರದ ಕಂಬವನ್ನು ಏರಿದ ರಾಮಣ್ಣ ಕಾರಣಿ ವಾಣಿಯನ್ನು ಬಿತ್ತರಿಸಿದರು. ಭರತ ಹುಣ್ಣಿಮೆಯ ಸಂದರ್ಭದಲ್ಲಿ ಮೈಲಾರ ಲಿಂಗೇಶ್ವರ ಜಾತ್ರೆಯನ್ನು ಮಾಡಲಾಗುತ್ತದೆ. ಭರತ ಹುಣ್ಣಿಮೆಯ ಮೊದಲೇ ರಥೋತ್ಸವ ನಡೆಯಿತು.
ಯಾವುದೇ ಜಾತಿ ಜನಾಂಗಕ್ಕೆ ಸೀಮಿತವಲ್ಲ. ಮೈಲಾರನ ಭಕ್ತರಿಗೆ ಯಾವುದೇ ಜಾತಿ ಧರ್ಮವಿಲ್ಲ. ಹಿಂದೂ ಮುಸ್ಲಿಂ ಸೇರಿದಂತೆ ಭಕ್ತರಿದ್ದಾರೆ. ಈ ಜಾತ್ರೆಗೆ ವಿವಿಧ ರಾಜ್ಯಗಳಿಂದ ಸಹ ಭೇಟಿ ನೀಡುತ್ತಾರೆ. ಯಾವುದೇ ಜಾತಿಯ ನಿರ್ಬಂಧವಿಲ್ಲ. ರೈತರು ಮೊದಲೇ ಎತ್ತುಗಳು ಮತ್ತು ಗಾಡಿಗಳನ್ನು ಸಿದ್ಧ ಮಾಡಿಕೊಂಡಿರುತ್ತಾರೆ. ಜಾತ್ರೆಗೆ ಬರುವಾಗ ಎತ್ತುಗಳನ್ನು ಬಣ್ಣ ಬಣ್ಣವಾಗಿ ಕಾಣುವಂತೆ ಮಾಡಿಕೊಂಡು ತಿನ್ನಲು ರೊಟ್ಟಿ ಪಲ್ಯೆ ಇತರ ಐಟಂ ಗಳನ್ನು ಮಾಡಿಕೊಂಡು ಜಾತ್ರೆಗೆ ಬರುತ್ತಾರೆ. ಇನ್ನೊಂದು ವಿಶೇಷವೆಂದರೆ ಪ್ರತಿ ಬಂಡಿಯ ಜೊತೆಗೆ ಒಬ್ಬರು ಕಾಲ್ನಡಿಗೆಯಲ್ಲಿ ಬರುತ್ತಾರೆ.
