2
Gaganyan: ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಲ್ಕು ಗಗನಯಾತ್ರಿಗಳನ್ನು ಜಗತ್ತಿಗೆ ಪರಿಚಯಿಸಿದರು.
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್ ಮತ್ತು ಗ್ರೂಪ್ ಕ್ಯಾಪ್ಟನ್ ಶುಭಬ್ಶು ಶುಕ್ಲಾ. ಗಗನಯಾನ ಮಿಷನ್ಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳಾಗಿದ್ದಾರೆ
ನಾಲ್ಕು ವರ್ಷಗಳ ಹಿಂದೆ ಶಾರ್ಟ್ಲಿಸ್ಟ್ ಮಾಡಲಾದ ಈ ನಾಲ್ವರೂ ಭಾರತೀಯ ವಾಯುಪಡೆಯ (ಐಎಎಫ್) ಏರ್ಕ್ರಾಫ್ಟ್ ಮತ್ತು ಸಿಸ್ಟಮ್ಸ್ ಟೆಸ್ಟಿಂಗ್ ಇ ಪರೀಕ್ಷೆಯ ಪೈಲೆಟ್ಗಳಾಗಿದ್ದಾರೆ.
“ದೇಶವು ನಾಲ್ಕು ಗಗನ್ಯಾನ್ ಪ್ರಯಾಣಿಕರ ಬಗ್ಗೆ ತಿಳಿದುಕೊಂಡಿದೆ. ಇವರು ಕೇವಲ ನಾಲ್ಕು ಜನರಲ್ಲ. ಇವರು ನಾಲ್ಕು ಶಕ್ತಿಗಳಿದ್ದಂತೆ. 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದ್ದಾರೆ” ಎಂದು ಪ್ರಧಾನಿ ಹೇಳಿದರು.
