Home » BK Hariprasad: ಪಾಕಿಸ್ತಾನ ಬಿಜೆಪಿಗೆ ಮಾತ್ರ ಶತ್ರು, ನಮ್ಮ ಕಾಂಗ್ರೆಸ್’ಗೆ ಅಲ್ಲ !! ಕಾಂಗ್ರೆಸ್ ನಾಯಕರ ಬಿಕೆ ಹರಿಪ್ರಸಾದ್ !!

BK Hariprasad: ಪಾಕಿಸ್ತಾನ ಬಿಜೆಪಿಗೆ ಮಾತ್ರ ಶತ್ರು, ನಮ್ಮ ಕಾಂಗ್ರೆಸ್’ಗೆ ಅಲ್ಲ !! ಕಾಂಗ್ರೆಸ್ ನಾಯಕರ ಬಿಕೆ ಹರಿಪ್ರಸಾದ್ !!

1 comment

BK Hariprasad: ಕಾಂಗ್ರೆಸ್ ನಾಯಕನ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರ ರಾಜ್ಯದ್ಯಾಂತ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಶಾಸಕ, ನಾಯಕ ಬಿಕೆ ಹರಿಪ್ರಸಾದ್(BK Hariprasada) ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ದಾರೆ.

ಇದನ್ನೂ ಓದಿ: Dakshina Kannada ಲೋಕಸಭಾ ಕ್ಷೇತ್ರದಿಂದ ಅರುಣ್‌ ಕುಮಾರ್‌ ಪುತ್ತಿಲ ಬಂಡಾಯ ಸ್ಪರ್ಧೆ

ಹೌದು, ವಿಧಾನ ಮಂಡಲ ಕಲಾಪದಲ್ಲಿ ಇವತ್ತೂ ಕೂಡಾ ಪಾಕಿಸ್ತಾನದ ಪರ ಘೋಷಣೆ ವಿಚಾರ ಕೋಲಾಹಲಕ್ಕೆ ಕಾರಣವಾಗಿದೆ, ಇದೇ ವೇಳೆ ಬಿಜೆಪಿಗೆ ಪಾಕಿಸ್ತಾನವು “ಶತ್ರು ದೇಶ”. ಆದರೆ ಕಾಂಗ್ರೆಸ್ ಅದನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ರಾಜ್ಯ ವಿಧಾನಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.

ಅಂದಹಾಗೆ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಈ ರೀತಿ ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು ತಿರುಗಿಬಿದ್ದರು. ಬಿ.ಕೆ.ಹರಿಪ್ರಸಾದ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹರಿಪ್ರಸಾದ್ ಅವರ ಹೇಳಿಕೆ ಕಾಂಗ್ರೆಸ್ ಪಾಕಿಸ್ತಾನದ ಬಗ್ಗೆ ಮೃದುತ್ವವನ್ನು ತೋರಿಸುತ್ತಿರುವುದು ಸಾಬೀತುಪಡಿಸುತ್ತಿದೆ ಎಂದರು ಹೇಳಿದರು.

You may also like

Leave a Comment