ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನೀಡಿದ್ದ ತಡೆಯನ್ನು ಹೈಕೋರ್ಟ್ ಗುರುವಾರ ಸಂಜೆ ವೇಳೆಗೆ ತೆರವುಗೊಳಿಸಿತು. ಚಿತ್ತಾಪುರದಲ್ಲಿ ಕಾರ್ಯಕ್ರಮ ನಡೆಸಲು ಹಸಿರು ನಿಶಾನೆ ತೋರಿತು. ಆ ಮೂಲಕ ಜಿಲ್ಲಾಡಳಿತ ತೀವ್ರ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ: Cognizant: ಕಾಗ್ನಿಜೆಂಟ್ ಸಂಸ್ಥೆಯ ಉದ್ಯೋಗಿಗಳಿಗೆ ಮುಖ್ಯವಾದ ಮಾಹಿತಿ
ಚಿತ್ತಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಚಕ್ರವರ್ತಿ ಸೂಲಿಬೆಲೆ ಅವರನ್ನು ಬುಧವಾರ ತಡರಾತ್ರಿ ಕಮಲಾಪುರದ ಕಿಣ್ಣಿ ಸಡಕ್ ಬಳಿ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದರು. ಸೂಲಿಬೆಲೆ ಭಾಷಣದಿಂದ ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆ ಬರುವ ಕಾರಣಕ್ಕೆ ಪ್ರವೇಶ ನಿರ್ಬಂಧಿಸಿ
ಉಪ ವಿಭಾಗಾಧಿಕಾರಿ ಆದೇಶದ ವಿರುದ್ಧ ಬಿಜೆಪಿ ಕಲಬುರಗಿ ಹೈಕೋರ್ಟ್ ಪೀಠದ ಮೊರೆ ಹೋಗಿತ್ತು. ಸೂಲಿಬೆಲೆ ಪರ ವಕೀಲ ಅರುಣ್ ಶ್ಯಾಮ್ ಹಾಗೂ ಬಸವಕಿರಣ ವಾದ ಮಂಡಿಸಿದ್ದರು.
ತೀರ್ಪು ಪ್ರಕಟದ ಬೆನ್ನಲ್ಲಿ ವಿಡಿಯೊ ಮಾಡಿರುವ ಚಕ್ರವರ್ತಿ ಸೂಲಿಬೆಲೆ “ಬಾಬಾ ಸಾಹೇಬರ ಸಂವಿಧಾನದ ಶಕ್ತಿಯ ಫಲದಿಂದ ನ್ಯಾಯಾಲಯದಲ್ಲಿ ಚಿತ್ತಾಪುರ ಕಾಠ್ಯಕ್ರಮಕ್ಕೆ ಅನುಮತಿ ಪಡೆದಿದ್ದೇವೆ,” ಎಂದು ಹೇಳಿದರು. ಬೆಳಗ್ಗೆ ಜಾಲತಾಣದಲ್ಲಿ ‘ಏ ಡರ್ ಅಚ್ಛಾ ಹೈ’ ಎಂದು ಚಿತ್ತಾಪುರ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ಕೊಟ್ಟಿದ್ದರು.
