Home » Dakshina Kannada: ಅಪಪ್ರಚಾರಕ್ಕೆ ನೊಂದ ಯುವತಿ, ನೇಣಿಗೆ ಶರಣು

Dakshina Kannada: ಅಪಪ್ರಚಾರಕ್ಕೆ ನೊಂದ ಯುವತಿ, ನೇಣಿಗೆ ಶರಣು

0 comments
Dakshina Kannada

ದ.ಕ; ಅಪಪ್ರಚಾರಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Accide Attack: ಕಡಬದಲ್ಲಿ ಆಸಿಡ್‌ ದಾಳಿ; ಲಕ್ಷ್ಮೀ ಹೆಬ್ಬಾಳ್ಕರ್‌ ಮೇಲೆ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ವಾಗ್ದಾಳಿ

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಮಾ.3 ರಂದು ನಡೆದಿದೆ. ದಿವ್ಯಾಶ್ರೀ (26) ಎಂಬಾಕೆಯೇ ಮೃತ ಹೊಂದಿದವರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದಿವ್ಯಾಶ್ರೀ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯವರು ಅನಂತರ ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಯುವತಿ ಅದಾಗಲೇ ಮೃತಪಟ್ಟಿದ್ದರು. ಎರಡು ತಿಂಗಳ ಹಿಂದೆ ಯುವತಿಯ ಕುರಿತು ಅಪಪ್ರಚಾರ ನಡೆಸಲಾಗಿದ್ದು, ಈ ಕಾರಣಕ್ಕೆ ಯುವತಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment