Home » Gold Theft: ಸ್ನೇಹಿತೆಯ ಮನೆಯಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದು ಗೋವಾಗೆ ಪರಾರಿಯಾದ ನಟಿ ಸ್ನೇಹಾ ಶೆಟ್ಟಿ

Gold Theft: ಸ್ನೇಹಿತೆಯ ಮನೆಯಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದು ಗೋವಾಗೆ ಪರಾರಿಯಾದ ನಟಿ ಸ್ನೇಹಾ ಶೆಟ್ಟಿ

0 comments
Gold Theft

ಸಿನಿಮಾ ನಟಿಯೊಬ್ಬಳು ಚಿನ್ನ ಕದ್ದ ಆರೋಪವನ್ನು ಹೊಂದಿದ್ದು ಈಕೆಯನ್ನು ಆಂಧ್ರಪ್ರದೇಶದ ವೈಜಾಗ್‌ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ನಟಿ ಸ್ನೇಹಾ ಶೆಟ್ಟಿ (Sneha Shetty) ಎಂಬಾಕೆಯೇ ಬಂಧಿತ ಆರೋಪಿ. ಭಾರತೀಯ ಅಂಚೆ ಇಲಾಖೆ ನೌಕರ ಪ್ರಸಾದ್‌ ಬಾಬು ಎಂಬುವವರ ಮನೆಯಲ್ಲಿ ನಟಿ ಸ್ನೇಹಾ ಕದ್ದಿರುವ ಆರೋಪವಿದೆ. ಇದೀಗ ನಟಿಯಿಂದ ಚಿನ್ನವನ್ನು ವಶಪಡಿಸಕೊಳ್ಳಲಾಗಿದ್ದು, ನಟಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಇದನ್ನೂ ಓದಿ: crime : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ವಸತಿ ಶಾಲೆ ಪ್ರಾಂಶುಪಾಲನ ಬಂಧನ

ಪ್ರಸಾದ್‌ ಬಾಬು ಅವರ ಮಗಳು ಮೌನಿಕಾರ ಗೆಳತಿ ಈ ನಟಿ ಸ್ನೇಹಾ ಶೆಟ್ಟಿ. ಈಕೆ ಆಗಾಗ್ಗೆ ಮೌನಿಕಾಳ ಭೇಟಿಗೆ ಆಕೆಯ ಮನೆಗೆ ಹೋಗುತ್ತಿದ್ದಳು. ಆ ಮನೆಯ ಜೀವನ ಶೈಲಿ, ಆದಾಯ ಈ ವಿಷಯಗಳ ಬಗ್ಗೆ ತಿಳಿದುಕೊಂಡ ನಟಿ ಸ್ನೇಹಾ ಶೆಟ್ಟಿ, ಪ್ರಸಾದ್‌ ಬಾಬು ಅವರು ಹಣ, ಒಡವೆಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿಯನ್ನು ಕೂಡಾ ತಿಳಿದುಕೊಂಡಿದ್ದಳು. ನಂತರ ಪ್ರಸಾದ್‌ ಬಾಬು ಕುಟುಂಬದವರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದ ಈಕೆ, ಇದೇ ವಿಶ್ವಾಸದ ಮೂಲಕ ಅವರ ಮನೆಯಿಂದ ಆಗಾಗ್ಗೆ ಚಿನ್ನ ಕದಿಯುತ್ತಿದ್ದಳು. ಇತ್ತೀಚೆಗೆ ಪ್ರಸಾದ್‌ ಬಾಬು ಹಾಗೂ ಕುಟುಂಬ ಮದುವೆಗೆಂದು ಹೋಗಿದ್ದಾಗ, ಸ್ನೇಹಾಶೆಟ್ಟಿ ಅವರ ಮನೆಯಿಂದ ಒಂದು ಕೆಜಿಗೂ ಹೆಚ್ಚು ಚಿನ್ನ ಕದ್ದಿದ್ದಳು.

ಮದುವೆಯಿಂದ ಹೊರ ಬಂದ ಪ್ರಸಾದ್‌ ಬಾಬು ಕುಟುಂಕ್ಕೆ ಚಿನ್ನ ಕಳ್ಳತನವಾಗಿರುವ ಅರಿವಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಕೆ ನಡೆಸಿದ ಪೊಲೀಸರು ಸ್ನೇಹಾ ಶೆಟ್ಟಿಯನ್ನು ವಿಚಾರಣೆ ನಡೆಸಿದಾಗ ಚಿನ್ನ ಕದ್ದಿರುವ ವಿಷಯವನ್ನು ಹೇಳಿದ್ದಾರೆ. ಚಿನ್ನ ಕದ್ದು ಗೋವಾಕ್ಕೆ ಸ್ನೇಹಾ ಶೆಟ್ಟಿ ಪರಾರಿಯಾಗಿದ್ದಳು. ಈಕೆ ಪೊಲೀಸರಿಗೆ ಕೇವಲ 74 ಗ್ರಾಂ ಚಿನ್ನ ಮಾತ್ರ ನೀಡಿದ್ದು, ಇನ್ನುಳಿದ ಚಿನ್ನ ನೀಡಲಾಗದು, ಒತ್ತಾಯ ಮಾಡಿದರೆ ಆತ್ಮಹತ್ಯೆ ಮಾಡುವುದಾಗಿ ಪೊಲೀಸರ ಮುಂದೆ ನಟಿ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ

You may also like

Leave a Comment