Home » Nanjangudu: ಹೆಂಡತಿಯೊಂದಿಗೆ ವಿಡಿಯೋ ಕಾಲ್’ನಲ್ಲಿದ್ದಾಗಲೇ ಮೈ ಮರೆತ ಗಂಡ, ಸ್ಥಳದಲ್ಲೇ ಸಾವು !!

Nanjangudu: ಹೆಂಡತಿಯೊಂದಿಗೆ ವಿಡಿಯೋ ಕಾಲ್’ನಲ್ಲಿದ್ದಾಗಲೇ ಮೈ ಮರೆತ ಗಂಡ, ಸ್ಥಳದಲ್ಲೇ ಸಾವು !!

0 comments

Nanjanagudu: ಹೆಂಡತಿಯೊಂದಿಗೆ ರೈಲ್ವೇ ಟ್ರ್ಯಾಕ್ ಮೇಲೆ ನಡೆಯುತ್ತ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಗಂಡ ರೈಲು ಬರೋದನ್ನ ಗಮನಿಸದೆ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಮನಮಿಡಿಯುವ ಘಟನೆ ನಡೆದಿದೆ.

ಹೌದು, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ(Nanjanagudu) ಬಿಹಾರ ಮೂಲದ ಮನುಕುಮಾರ್ (27) ಎಂಬ ವಿವಾಹಿತ ಹೆಂಡತಿಯೊಂದಿಗೆ ವಿಡಿಯೋ ಕಾಲ್ ಮಾಡುವ ವೇಳೆ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಂದಹಾಗೆ ನಂಜನಗೂಡಿನ ದೊಡ್ಡಕವಲಂದೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಮನುಕುಮಾರ್ ಬೆಳಿಗ್ಗೆ 7:40 ಕ್ಕೆ ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ರೈಲು ಹಳಿ ಮೇಲೆ ಇದ್ದನು. ಈ ವೇಳೆ ರೈಲು ಚಾಮರಾಜನಗರ ಕಡೆಯಿಂದ ಮೈಸೂರಿಗೆ ಬರುತ್ತಿತ್ತು. ರೈಲು ಹಳಿ ಪಕ್ಕದಲ್ಲಿ ಕೂತು ಮಾತನಾಡುವಾಗ ಈ ಅವಘಡ ನಡೆದಿದೆ.

You may also like

Leave a Comment