Home » Gold Rate: ಗಗನಕ್ಕೇರಿದ ಚಿನ್ನ, ಬೆಳ್ಳಿ ದರ

Gold Rate: ಗಗನಕ್ಕೇರಿದ ಚಿನ್ನ, ಬೆಳ್ಳಿ ದರ

1 comment
Gold Rate

ಹಲವು ದಿನಗಳಿಂದ ಏರಿಕೆಯ ಹಾದಿಯಲ್ಲಿರುವ ಚಿನ್ನದ ಬೆಲೆ ಮಂಗಳವಾರ ದೆಹಲಿಯ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ 800 ರೂ. ಏರಿಕೆ ಕಾಣುವ ಮೂಲಕ 65000 ರು. ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಉಳಿದಂತೆ ಮುಂಬೈ ಮತ್ತು ಕೋಲ್ಕತ್ತಾದಲ್ಲಿ 24ರೂ.ಗೆ ಏರಿದೆ.

ಇದನ್ನೂ ಓದಿ: Bangalore: ನಾಸಿರ್ ಹುಸೇನ್ ನಾಲ್ಕನೇ ಆರೋಪಿಯಾಗಿ ಸೇರಿಸಬೇಕು- ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ

ಇನ್ನೊಂದೆಡೆ ಬೆಳ್ಳಿಬೆಲೆ ಕೂಡಾ ಕೆಜಿಗೆ 900 ರು. ಏರಿಕೆ ಕಂಡು 74900 ರೂ.ಗೆ ತಲುಪಿದೆ. ಅಮೆರಿಕದಲ್ಲಿ ವಾಣಿಜ್ಯ ವಲಯದಲ್ಲಿ ಹೂಡಿಕೆ ಕಡಿಮೆಯಾಗಿರುವುದು, ಕೇಂದ್ರೀಯ ಬ್ಯಾಂಕ್ ಶೀಘ್ರವೇ ಬಡ್ಡಿದರ ಕಡಿತ ಮಾಡುವ ಸುಳಿವು, ಹಣದುಬ್ಬರದ ಆತಂಕವು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

You may also like

Leave a Comment