Kalaburagi: ನನಗೆ ಅಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿ ಯತ್ನ ಮಾಡಿದ್ದಾರೆ ಎಂದು ಸಿಎಂ ಸಲಹೆಗಾರ ಆಳಂದ ಶಾಸಕ ಬಿ.ಆರ್.ಪಾಟೀಲ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: Bangalore: ಪಾಕ್ ಪರ ಘೋಷಣೆ ಕೂಗಿದ್ದ ಮುನಾವರ್ ಐಎಎಸ್ ಅಧಿಕಾರಿಯ ಬಾಡಿಗೆ ಮನೆಯಲ್ಲಿದ್ದ
ಈ ಮೂಲಕ ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ ಮುನ್ನಲೆಗೆ ಬಂದಿದೆ ಎನ್ನಬಹುದು. ಈ ಬಗ್ಗೆ ಮಾತನಾಡಿದ ಬಿ.ಆರ್.ಪಾಟೀಲ್ ಕಳೆದ ಎರಡು ತಿಂಗಳ ಹಿಂದೆ ನನಗೆ ಸಂಪರ್ಕ ಮಾಡಿ ಚುನಾವಣೆ ಖರ್ಚು ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಆಫರ್ ನೀಡಿದ್ದರು. ನನ್ನಂತೆ ಇತರೆ ಮೂರು ಜನ ಶಾಸಕರಿಗೆ ಸಹ ಅಪರೇಷನ್ ಕಮಲ ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ಸಿಎಂ ಅವರಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ಅಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
