Strange demand of wife: ಮದುವೆಯಾದ ಬಳಿಕ ಮಕ್ಕಳನ್ನು ಪಡೆಯಬೇಕೆಂಬುದು ಪ್ರತಿಯೊಂದು ದಂಪತಿಯ ಕನಸು. ಅದರಲ್ಲೂ ತಾಯಿ ಆಗುವುದೆಂದೆಂದರೆ ಹೆಣ್ಣಿಗೆ ಬಲು ಆಸೆ. ಆದರೆ ಇಲ್ಲೊಬ್ಬಳು ಹೆಂಡತಿ ಮಗು ಹೆರಲು ತನ್ನ ಗಂಡನಿಂದ ಪ್ರತೀ ತಿಂಗಳು 2.5 ಕೋಟಿ ರೂ ಹಣ ಪಡೆದುಕೊಂಡಿದ್ದಾಳೆ(Strange demand of wife)
ಇದನ್ನೂ ಓದಿ: School Timings: ರಂಜಾನ್ ತಿಂಗಳಲ್ಲಿ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ ಶಾಲಾ ಅವಧಿ ಬದಲಾವಣೆ-ರಾಜ್ಯ ಸರಕಾರ ಆದೇಶ
https://www.instagram.com/reel/C4IYLeFh84p/?igsh=cWhzZmJ4Mm1ja2F6
ಹೌದು, ದುಬೈನ ಶ್ರೀಮಂತ ಉದ್ಯಮಿ, ಖ್ಯಾತ ಮಿಲೇನಿಯರ್ ಅನ್ನು ಮದುವೆಯಾಗಿರುವ ಸೂದಿ ಎಂಬ ಮಹಿಳೆ ತನ್ನನ್ನು ತಾನು ಗೃಹಿಣಿ ಎಂದು ಬಣ್ಣಿಸಿಕೊಳ್ಳುವ ಮೂಲಕ ತನ್ನ ಗಂಡನ ದೊಡ್ಡ ಗಳಿಕೆಯನ್ನು ಖರ್ಚು ಮಾಡುತ್ತಾಳೆ. ಆಕೆಯ ಐಷಾರಾಮಿ ಜೀವನವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ. ಇದೀಗ ತಾನು ಮಗುವನ್ನು ಹೊಂದಲು ಆಕೆ ತನ್ನ ಮಿಲಿಯನೇರ್ ಪತಿಯಿಂದ 2.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾಳೆ ಎಂದು ವರದಿಗಳಿಂದ ತಿಳಿದುಬಂದಿದೆ. ವಿಚಾರ ಈಗ ಇಂಟರ್‌ನೆಟ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಅಂದಹಾಗೆ ಇದನ್ನು ಸ್ವತಃ ಈಕೆಯೇ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾಳೆ. ತನ್ನ ಐಷಾರಾಮಿ ಲೈಫ್‌ಸ್ಟೈಲ್‌ನಿಂದ ಇನ್ಸ್ಟಾಗ್ರಾಮ್‌ನಲ್ಲಿ ಫೇಮಸ್ ಆಗಿರುವ ಸೌಂದಿ ತನ್ನ ಗಂಡ ಜಮಾಲ್‌ಗೆ ಹೀಗೆ ಬೇಡಿಕೆ ಇರಿಸಿದ ಮಹಿಳೆ. ಹೌಸ್ ವೈಫ್ ಆಗಿರುವ ಈಕೆ ಗಂಡನ ಹಣವನ್ನು ಖರ್ಚು ಮಾಡುವುದೇ ನನ್ನ ಕೆಲಸ ಎಂದು ಹೇಳಿಕೊಳ್ಳುತ್ತಾಳೆ.
Aadhar Update ಮಾಡಲು ಅವಧಿ ವಿಸ್ತರಣೆ!! ಉಚಿತ ತಿದ್ದುಪಡಿಗೆ ಲಾಸ್ಟ್ ಡೇಟ್ ಯಾವಾಗ ಗೊತ್ತಾ??
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೆರದುಕೊಂಡ ಈಕೆ ನಾನು ಗರ್ಭಿಣಿಯಾಗುವುದಕ್ಕೂ ಮೊದಲು ನನ್ನ ಪತಿ ಜೊತೆ ಚರ್ಚೆ ನಡೆಸಿದ ವಿಚಾರವಿದು. ನಾನು ನೇರವಾಗಿ ನಿಮ್ಮ ಬಳಿ ವಿಚಾರ ಹಂಚಿಕೊಳ್ಳುತ್ತೇನೆ. ನಾನು ಉಚಿತವಾಗಿ ನನ್ನ ದೇಹವನ್ನು ಅಷ್ಟೊಂದು ನೋವಿಗೆ ಒಡ್ಡಿಕೊಳ್ಳುವ ಮಾತೇ ಇಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ಒಂದು ವೇಳೆ ಮಗು ಗಂಡಾದರೆ ನೀಲಿ ಬಣ್ಣದ ಐಷಾರಾಮಿ ಬಿರ್ಕಿನ್ ಬ್ಯಾಗ್ ಹಾಗೂ ಹೆಣ್ಣು ಮಗುವಾದರೆ ಪಿಂಕ್ ಬಣ್ಣದ ಬಿರ್ಕಿನ್ ಬ್ಯಾಗ್ ನೀಡಬೇಕು ಎಂದು ಕೇಳಿದ್ದೇನೆ ಎಂದು ತಿಳಿಸಿದ್ದಾಳೆ.
