Home » Bengaluru: ಪ್ರಿಯಕರನ ಜತೆ ಸೇರಿಕೊಂಡು ಪತ್ನಿಯಿಂದ ಅಶ್ಲೀಲ ವಿಡಿಯೋ ನೆಟ್ಟಿಗೆ ಅಪ್ಲೋಡ್, ಪತಿಯಿಂದ ದೂರು ದಾಖಲು !

Bengaluru: ಪ್ರಿಯಕರನ ಜತೆ ಸೇರಿಕೊಂಡು ಪತ್ನಿಯಿಂದ ಅಶ್ಲೀಲ ವಿಡಿಯೋ ನೆಟ್ಟಿಗೆ ಅಪ್ಲೋಡ್, ಪತಿಯಿಂದ ದೂರು ದಾಖಲು !

1 comment
Bengaluru

ಬೆಂಗಳೂರು: ವಿವಾಹಿತ ಮಹಿಳೆಯೊಬ್ಬಳು ನೆಟ್ಟಗೆ ಗಂಡನ ಜತೆ ಸಂಸಾರ ಮಾಡುವುದನ್ನು ಬಿಟ್ಟು ನೆಟ್ಟಿಗೆ ತಾನು ಲೈಂಗಿಕ ಚಟುವಟಿಕೆ ನಡೆಸಿರುವ ಚಿತ್ರೀಕರಣದ ವಿಡಿಯೋವನ್ನು ಪೋರ್ನ್ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತಿದ್ದಾಳೆ. ಅದೂ ಅಲ್ಲದೆ ತನ್ನ ಪ್ರಿಯಕರನ ಸೇರಿಕೊಂಡು ಮನೆಯೊಂದರಲ್ಲಿ ಸೆಕ್ಸ್ ಮಾಡುತ್ತಾ ಅದನ್ನು ರೆಕಾರ್ಡ್ ಮಾಡುತ್ತಾ ಹಣಕ್ಕಾಗಿ ಆ ನಗ್ನ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗಳಿಗೆ ಮಾರಿದ ಆಘಾತಕಾರಿ ದೂರು ಬಂದಿದೆ.

ಇದನ್ನೂ ಓದಿ: Janina Prajeres : ತನ್ನನ್ನು ತಾನೇ ಮದುವೆಯಾದ ಮಾಡೆಲ್ – ಕೊಟ್ಟ ಕಾರಣ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ!!

ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖುದ್ದು ಆಕೆಯ ಮಹಿಳೆಯ ಗುತ್ತಿಗೆದಾರ ಪತಿ ದೂರು ನೀಡಿದ್ದು, ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಸೇರಿ ಈ ನೀಚ ಕೆಲಸ್ಕಕಾಗಿ ಬೆಂಗಳೂರಿನ ಉಲ್ಲಾಳ ಉಪನಗರದ 5ನೇ ಮುಖ್ಯರಸ್ತೆಯಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಪಡೆದುಕೊಂಡಿ ದ್ದಾಳೆ. ಆಕೆ ಅಲ್ಲಿ ತನ್ನ ಅವರಿಬ್ಬರ ಲೈಂಗಿಕ ಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇವರ ಜೊತೆ ಮತ್ತಿಬ್ಬರು ಕೂಡಾ ಸೇರಿಕೊಂಡು ಈ ಧಂಧೆಗೆ ಇಳಿದಿದ್ದಾರೆ. ಎಲ್ಲರೂ ಯುವಕರ ಹಾದಿ ತಪ್ಪಿಸುತ್ತಿದ್ದಾರೆ. ಈ ನಾಲ್ವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ತಮಗೂ ಜೀವಭಯವಿದ್ದು, ರಕ್ಷಣೆ ನೀಡಬೇಕೆಂದು ದೂರುದಾರರಾದ ಪತಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

You may also like

Leave a Comment