Home » Arvind Kejriwal:ನಿಮ್ಮ ಗಂಡಂದಿರು ಮೋದಿ ಜಪ ಮಾಡಿದರೆ ರಾತ್ರಿ ಊಟ ಕೊಡಬೇಡಿ : ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ

Arvind Kejriwal:ನಿಮ್ಮ ಗಂಡಂದಿರು ಮೋದಿ ಜಪ ಮಾಡಿದರೆ ರಾತ್ರಿ ಊಟ ಕೊಡಬೇಡಿ : ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ

1 comment

Arvind Kejriwal:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಅವರು ಶನಿವಾರ ಮಹಿಳೆಯರಿಗೆ ನಿಮ್ಮ ಗಂಡಂದಿರು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು “ಜಪಿಸಿದರೆ” ತಮ್ಮ ಊಟ ಕೊಡಬೇಡಿ ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ.

 

ಅನೇಕ ಪುರುಷರು ಮೋದಿಯವರ ಹೆಸರನ್ನು ಜಪಿಸುತ್ತಿದ್ದಾರೆ, ಆದರೆ ನೀವು ಅದನ್ನು ಸರಿಯಾಗಿ ತಿದ್ದಬೇಕು. ನಿಮ್ಮ ಪತಿ ಮೋದಿಯ ಹೆಸರನ್ನು ಜಪಿಸಿದರೆ, ನೀವು ಅವರಿಗೆ ಊಟ ಕೊಡುವುದಿಲ್ಲ ಎಂದು ಹೇಳಿ “ಎಂದು ಕೇಜ್ರಿವಾಲ್ ದೆಹಲಿಯಲ್ಲಿ ‘ಮಹಿಳಾ ಸಮ್ಮಾನ್ ಸಮರೋಹ್” ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ ಹೇಳಿದರು.

 

ದೆಹಲಿ ಸರ್ಕಾರವು ತನ್ನ ಬಜೆಟ್ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ 1,000 ರೂಪಾಯಿಗಳನ್ನು ಒದಗಿಸುವ ಯೋಜನೆಯನ್ನು ಘೋಷಿಸಿದ ನಂತರ ಮಹಿಳೆಯರೊಂದಿಗೆ ಸಂವಾದ ನಡೆಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಮ್ಮನ್ನು ಮತ್ತು ಎಎಪಿಯನ್ನು ಬೆಂಬಲಿಸುವುದಾಗಿ ಪ್ರತಿಜ್ಞೆ ಮಾಡುವಂತೆ ತಮ್ಮ ಕುಟುಂಬ ಸದಸ್ಯರನ್ನು ಕೇಳಿಕೊಳ್ಳುವಂತೆ ಅರವಿಂದ್ ಕೇಜ್ರಿವಾಲ್ ಮಹಿಳೆಯರಿಗೆ ಹೇಳಿದರು.

 

“ನಾನು ನಿಮ್ಮ ವಿದ್ಯುತ್ ಅನ್ನು ಉಚಿತಗೊಳಿಸಿದ್ದೇನೆ, ನಿಮ್ಮ ಬಸ್ ಟಿಕೆಟ್ಗಳನ್ನು ಉಚಿತಗೊಳಿಸಿದ್ದೇನೆ ಹಾಗೆಯೇ ಈ ಭಾರಿ ಬಜೆಟ್ ನಲ್ಲಿ 1,000 ರೂಪಾಯಿಗಳನ್ನು ಪ್ರತಿ ತಿಂಗಳು ಮಹಿಳೆಯರಿಗೆ ನೀಡುವುದಾಗಿ ತಿಳಿಸಿದ್ದೇನೆ. ಆದರೆ ಬಿಜೆಪಿ ನಿಮಗೇನು ಮಾಡಿದೆ? ಬಿಜೆಪಿಗೇಕೆ ಮತ ಹಾಕಬೇಕು? ಈ ಬಾರಿ ಎಎಪಿ ಪಕ್ಷಕ್ಕೆ ಮತ ಹಾಕಿ “ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ : ದಲಿತ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ: ಸದ್ಯಕ್ಕೆ ದಲಿತ ಸಿಎಂ ವಿಚಾರ ಅಪ್ರಸ್ತುತ ಎಂದ ಪರಮೇಶ್ವರ್

You may also like

Leave a Comment