Home » Harassment Case: ಫ್ರೀ ಟಿಕೆಟ್ ಕೊಡ್ತೀನಿ, ಆದ್ರೆ ಕೋಪ್ರೇಟ್ ಮಾಡು- ಬಸ್ಸಲ್ಲಿ ಹುಡುಗಿಯ ಖಾಸಗಿ ಅಂಗ ಮುಟ್ಟಿ ಕಂಡಕ್ಟರ್ ಕಿರುಕುಳ !!

Harassment Case: ಫ್ರೀ ಟಿಕೆಟ್ ಕೊಡ್ತೀನಿ, ಆದ್ರೆ ಕೋಪ್ರೇಟ್ ಮಾಡು- ಬಸ್ಸಲ್ಲಿ ಹುಡುಗಿಯ ಖಾಸಗಿ ಅಂಗ ಮುಟ್ಟಿ ಕಂಡಕ್ಟರ್ ಕಿರುಕುಳ !!

0 comments

Harassment Case: KSRTC ಬಸ್ಸಿನಲ್ಲಿ ತಡರಾತ್ರಿ ಪ್ರಯಾಣಿಸುತ್ತಿದ್ದ ಕಂಡಕ್ಟರ್ ಒಬ್ಬ ಫ್ರೀ ಟಿಕೆಟ್ ಬೇಕಂದ್ರೆ ಸಹಕರಿಸು ಎಂದು ಆಕೆಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ(Harassment case) ನೀಡಿದ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: K S Eshwarappa: ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ ವಿರುದ್ಧ ಬಂಡಾಯ ಸ್ಪರ್ಧೆ ಸುಳಿವು ಕೊಟ್ಟ ಕೆಎಸ್ ಈಶ್ವರಪ್ಪ!

ಹೌದು, ಫೆಬ್ರವರಿ 18ರ ರಾತ್ರಿ ಕೆಎ-36,ಎಫ್-1532 ನಂಬರ್ನ ಬಸ್ನಲ್ಲಿ ಮಹಿಳೆಯೋರ್ವರು ರಾಯಚೂರು(Rayachur) ಟು ಬೆಂಗಳೂರಿಗೆ(Bengaluru) ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆಗೆ ಕಂಡಕ್ಟರ್ ಸೊಂಟ ಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು ಕಂಡಕ್ಟರ್ ವಿರುದ್ಧ ರಾಯಚೂರು ವಿಭಾಗದ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: Politics: ಮೂವರು ಬಿಜೆಪಿ ಸಂಸದರು, ಮಾಜಿ ಸಿಎಂ ಕಾಂಗ್ರೆಸ್‌ ಸಂಪರ್ಕದಲ್ಲಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡಗೆ ಕಾಂಗ್ರೆಸ್‌ ಆಹ್ವಾನ ನೀಡಿದ ಡಿಕೆಶಿ

ಅಂದಹಾಗೆ ಸಂತ್ರಸ್ತ ಮಹಿಳೆ ಡ್ರೈವರ್ ಸೀಟ್ ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡ್ತಿದ್ದರು. ಡ್ರೈವರ್ ಮಲಗೋಕೆ ಇರುವ ಸೀಟ್ನಲ್ಲಿ ಕಂಡಕ್ಟರ್ ಲಕ್ಷ್ಮೀಕಾಂತ್ ರೆಡ್ಡಿ ಮಲಗಿದ್ದ. ಲೈಟ್ ಆಫ್ ಆದ ಸಮಯದಲ್ಲಿ ಪಕ್ಕದಲ್ಲಿದ್ದ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದ. ಫ್ರೀ ಟಿಕೆಟ್ ಹರಿದು ತನ್ನ ಜೇಬ್ನಲ್ಲಿ ಇಟ್ಟುಕೊಂಡು ಟಿಕೆಟ್ ಬೇಕಾದ್ರೆ ಲೈಂಗಿಕವಾಗಿ ಸಹಕರಿಸು, ಇಲ್ಲ ಫೈನ್ ಬೀಳುತ್ತೆ ಎಂದು ಹೇಳಿ ಪಟ್ಟು ಹಿಡಿದಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಅಲ್ಲದೆ ನನ್ನ ಕಡೆ ತಿರುಗಿ ಮಲಕೊಂಡು ನನ್ನ ಸೊಂಟಕ್ಕೆ ಕೈಹಾಕಿದ್ದ. ನಾನು ಹಾರ್ಟ್ ಪೇಶೆಂಟ್, ಹುಷಾರ್ ಇಲ್ಲ ಕಿರುಕುಳ ಕೊಡಬೇಡಿ ಅಂದ್ರು ಬಿಡಲಿಲ್ಲ. ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆ ವರೆಗೂ ಕಿರುಕುಳ ಕೊಟ್ಟ. ಕೂಡಲೇ ಕಂಡಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಮಹಿಳೆ ರಾಯಚೂರು ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದ್ದು, ಕಂಡಕ್ಟರ್ ಮಾತ್ರ ನಾನು ಕಿರುಕುಳ ನೀಡಿಲ್ಲ ಎಂದು ಮಹಿಳೆಯ ಆರೋಪವನ್ನು ಅಲ್ಲಗೆಳೆದಿದ್ದಾನೆ. ಕಂಡಕ್ಟರ್ ವರ್ತನೆಗೆ ಜನರು ಆಕ್ರೋಶ ಹೊರ ಹಾಕಿದ್ದಾರೆ.

You may also like

Leave a Comment